ಶೋಷಿತರಲ್ಲಿ ಜಾಗೃತಿಯ ಬೆಳಕು ಮೂಡಿಸಿದ ಪ್ರೊ|| ಬಿ.ಕೃಷ್ಣಪ್ಪ

ಹರಿಹರದ ಪ್ರೊ. ಬಿ.ಕೃಷ್ಣಪ್ಪರ 82ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಜಿ.ಪಂ. ಸಿಇಒ ಪದ್ಮ ಬಸವಂತಪ್ಪ ಸ್ಮರಣೆ

ಹರಿಹರ, ಜೂ.9- ಕುಟುಂಬದ ಹಿತ ಮರೆತು ರಾಜ್ಯಾದ್ಯಂತ ಸಂಚರಿಸಿ, ಶೋಷಿತರಲ್ಲಿ ಜಾಗೃತಿಯ ಬೆಳಕನ್ನು ಮೂಡಿಸಿದ ಪ್ರೊ.ಬಿ.ಕೃಷ್ಣಪ್ಪನವರು ಹರಿಹರದವರು ಎಂಬುದೇ ಸಂತಸದ ವಿಷಯ ಎಂದು ಜಿ.ಪಂ ಸಿಇಒ ಪದ್ಮಾ ಬಸವಂತಪ್ಪ ಹೇಳಿದರು.

ನಗರ ಹೊರವಲಯದ ಮೈತ್ರಿ ವನದಲ್ಲಿ ಸೋಮವಾರ ಡಿಎಸ್‌ಎಸ್ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಆಯೋಜಿಸಿದ್ದ ಪ್ರೊ.ಬಿ.ಕೃಷ್ಣಪ್ಪರ 82ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿ|| ಪ್ರೊ.ಬಿ.ಕೃಷ್ಣಪ್ಪ ರಾಜ್ಯದ ಶೋಷಿತರ ಬಾಳಿಗೆ ಬೆಳಕು ನೀಡಿದ ಚೇತನ, ಇಂತಹ ಮಹಾಪುರುಷರ ತತ್ವಾದರ್ಶಗಳನ್ನು ಪಾಲಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ ಎಂದರು.

ಸರ್ಕಾರ ಜಾರಿಗೊಳಿಸಿದ ಹತ್ತಾರು ಯೋಜನೆ, ಸೌಲಭ್ಯಗಳನ್ನು ಗ್ರಾಮೀಣ ಭಾಗದ ಅರ್ಹ ಫಲಾನುಭವಿಗಳಿಗೆ ದೊರೆಯುವಂತೆ ಮಾಡಬೇಕು. ಶಿಕ್ಷಣದ ಮಹತ್ವವನ್ನು ತಿಳಿಸಬೇಕಾಗಿದೆ. ಈ ದಿಕ್ಕಿನಲ್ಲಿ ದಲಿತ ಮುಖಂಡರು ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.

ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್‌ ಮಾತನಾಡಿ, ಧರ್ಮದ ಹೆಸರಲ್ಲಿ ಆಚರಿಸಲಾಗುವ ಮೂಢನಂಬಿಕೆ, ಕಂದಾಚಾರಗಳ ವಿರುದ್ಧ ಧ್ವನಿ ಎತ್ತಿದ, ಹೋರಾಟಗಳನ್ನು ರೂಪಿಸಿದ ಪ್ರೊ.ಬಿ.ಕೃಷ್ಣಪ್ಪ ಎಲ್ಲಾ ಸಮುದಾಯದ ಕಣ್ಮಣಿಯಾಗಿದ್ದಾರೆ ಎಂದರು.

ಡಿಎಸ್‌ಎಸ್ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಮಾತನಾಡಿದರು.

ಈ ಸಂದರ್ಭದಲ್ಲಿ ಡಿಎಸ್‌ಎಸ್ ಮುಖಂಡರಾದ ನಿಟ್ಟೂರು ಕೃಷ್ಣಪ್ಪ, ಅಂಜಿನಪ್ಪ, ನಿಷ್ಕಲಾ ಮಹಂತೇಶ್, ಮಂಜುನಾಥ್, ಚೌಡಪ್ಪ, ರವಿ, ಸುರೇಶ್, ಹನುಮಂತಪ್ಪ, ರಾಜಪ್ಪ, ರಾಜು, ಅಪ್ಪು, ಅಣ್ಣಪ್ಪ, ಭರತ್, ಬಸವರಾಜ್ ಹೊಸಪಾಳ್ಯ, ಪ್ರಭು ನಿಟ್ಟೂರು, ವಿ.ವಿ.ಹಳದಪ್ಪ, ಯುವರಾಜ್, ರವಿಕುಮಾರ್, ಮಂಜುನಾಥ್, ಹಳದಪ್ಪ, ಪ್ರದೀಪ್ ಕುಮಾರ್, ಕುಮಾರ್ ಆಟೋ ಮತ್ತಿತರರಿದ್ದರು.

error: Content is protected !!