ಭ್ರಷ್ಟಾಚಾರದ ಕಳೆ ಕೀಳೋಣ…

ಸ್ನೇಹ, ಪ್ರೀತಿ, ವಚನ, ಹಣದ ಭ್ರಷ್ಟತೆ
ಹುಟ್ಟು, ಒಲುಮೆ ಶಿಕ್ಷಣ, ಓಲೈಕೆಯೇ ಲಂಚ

ಆತುರ, ಮೀರಿದ ಬಯಕೆ, ಆಸೆಗಳು,
ದೊರಕದ್ದನ್ನು ದೊರಕಿಸಿಕೊಳ್ಳುವಿಕೆ ಭ್ರಷ್ಟಾಚಾರ.

ಸುಲಭದಲಿ ಸಿಕ್ಕ ಹಣ್ಣು, ಹೆಣ್ಣು, ವಿದ್ಯೆ
ಮೋಹ, ಅಧಿಕಾರ, ಅನುಭವಿಸುವಿಕೆ

ಶರವೇಗ ಅಸಮತೋಲನ ಉನ್ನತಿ,
ಸುಲಭಾಡ೦ಬರ  ಗೌರವ ಕೂಡ ಅತಿ ಭ್ರಷ್ಟಾಚಾರ.

ಅಗೌಣ, ಜಾತಿ, ಮತ, ಅಯೋಗ್ಯರ
ಮನ್ನಣೆ ಕೂಡ ಭ್ರಷ್ಟಾಚಾರ.

ಅಂಗೈ, ಬಣ್ಣ, ನಿಖರತೆ, ತುಲನೆ
ನಿರ್ಲಕ್ಷತೆ, ವೈಭವೀಕರಣವೇ ಭ್ರಷ್ಟತೆ.

ಗುರುಕುಲ ಶಿಕ್ಷಣ, ಸಮ ಸಮತೆಗೆ
ಸಮಾನ ಅಧಿಕಾರ,ಸೌಲತ್ತು,ಆರ್ಥಿಕ
ಮಾನದಂಡ ಅನ್ವಯ ಕಡ್ಡಾಯ ಶಿಕ್ಷಣ,
ಮನೆ,ಆಹಾರ ನೇರ ಪೂರೈಕೆ.

ಸಮ ವಿದ್ಯೆ, ಸಮ ಬಾಳು, ಸಮ ಸ್ಥಿತಿ
ಸಂವಿಧಾನದ ಸಮಾನತೆಗೆ ತಿದ್ದುಪಡಿ
ಸರ್ಕಾರಿ ಶಿಕ್ಷಣ, ಸರಕಾರ ಸೂತ್ರ ಸಮ
ಅಳವಡಿಕೆ ಭ್ರಷ್ಟತೆಗೆ ಕೊನೆ.

ಬಾಲ್ಯ, ಯುವಶಕ್ತಿಯಲಿ ಭ್ರಷ್ಟಮುಕ್ತ
ಅರಿವು, ಭ್ರಷ್ಟಮುಕ್ತ ಸುಖಿ ಬಾಳಿಗೆ,
ಕಳೆ ಬಂದಂತೆ ತಾಳ್ಮೆ ಮಂತ್ರದಂಡ
ದಿಂದ ಕಿತ್ತರೆ ಇಲ್ಲ ಭ್ರಷ್ಟಾಚಾರ.

ಸುಲಭದಲಿ ಸಿಗದಂತೆ, ಮನಸ
ಪರಿವರ್ತಿಸಿದರೆ ತಡೆಯಬಹುದು.


ಡಾ. ರೇವಣ್ಣ ಬಳ್ಳಾರಿ, ಸಾಹಿತಿ
ನ್ಯಾಯವಾದಿ, ಹೈಕೋರ್ಟ್.
[email protected]

error: Content is protected !!