ಪಾಲಿಕೆಯ ಎಲ್ಲಾ ವಾರ್ಡ್‌ಗಳಿಗೆ ವಾಚನಾಲಯ ವಿಸ್ತರಿಸಿ

ದಾವಣಗೆರೆ, ಜೂ.6- ಮಹಾನಗರ ಪಾಲಿಕೆಯ ಎಲ್ಲಾ 45 ವಾರ್ಡ್‌ಗಳಿಗೆ ವಾಚನಾಲಯಗಳನ್ನು ವಿಸ್ತರಿಸಬೇಕೆಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ.ಬಾವಿ ಅವರು ನಗರ ಪಾಲಿಕೆಯನ್ನು ಆಗ್ರಹಿಸಿದ್ದಾರೆ. 

ಈ ಸಂಬಂಧ ಎಲ್ಲಾ ದಿನಪತ್ರಿಕೆಗಳ ಸಂಪಾದಕರುಗಳು ಸಭೆ ಸೇರಿ,  ಪಾಲಿಕೆಯ ಮಹಾಪೌರ ಬಿ.ಜೆ.ಅಜಯ್ ಕುಮಾರ್, ಆಯುಕ್ತ ವಿಶ್ವನಾಥ್ ಮುದಜ್ಜಿ ಹಾಗೂ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ಅವರುಗಳಿಗೆ ಈ ಬಗ್ಗೆ ಮನವಿ ಅರ್ಪಿಸಲಾಯಿತು.

ಹಿಂದಿನ ಆಡಳಿತ ಮಂಡಳಿಯವರು ನಗರದಲ್ಲಿ ಸಾಕ್ಷರತೆಯನ್ನು ಹೆಚ್ಚಿಸುವ ಉದ್ದೇಶದಿಂದ 32 ವಾರ್ಡುಗಳನ್ನು ಆರಂಭಿಸಿ, ಪ್ರತಿ ವಾರ್ಡಿನಲ್ಲಿ ಒಂದು ವಾಚನಾಲಯವನ್ನು ಆರಂಭಿಸಿದ್ದರು. ಆದರೆ, ಇತ್ತೀಚೆಗೆ ಆಡಳಿತ ಮಂಡಳಿಯವರು ಕೇವಲ 15 ಪತ್ರಿಕೆಗಳನ್ನು ಸರಬರಾಜು ಮಾಡುವಂತೆ ಸೀಮಿತಗೊಳಿಸಿ ಆದೇಶಿಸಿದ್ದರು. ಇದರಿಂದ ಸಾಕ್ಷರತೆಗೆ ಹಿನ್ನೆಡೆಯಾದಂತಾಗಿದೆ. ಈ ಬಗ್ಗೆ ಪಾಲಿಕೆಯ ಆಡಳಿತ ಮಂಡಳಿಯವರು ಗಮನಹರಿಸುವಂತೆ ಆಗ್ರಹಿಸಿದರು. ಅಲ್ಲದೇ ನಗರದ ಕಂದಾಯದಾರರಿಂದ ವಾಚನಾಲಯ ಸೆಸ್‌ ವಸೂಲಿ ಮಾಡುತ್ತಿದ್ದು, ಸದರಿ  ಹಣದಲ್ಲಿ ಸ್ಥಳೀಯ ಮತ್ತು ರಾಜ್ಯಮಟ್ಟದ ಪತ್ರಿಕೆಗಳನ್ನು ಖರೀದಿಸುವಂತೆ ಮನವಿಯಲ್ಲಿ ತಿಳಿಸಲಾಗಿದೆ. 

ಈ ಸಂದರ್ಭದಲ್ಲಿ `ಮಲ್ನಾಡ ವಾಣಿ’ ಸಂಪಾದಕ ಕೆ.ಏಕಾಂತಪ್ಪ, `ಜಿಲ್ಲೆ ಸಮಾಚಾರ’ ಸಂಪಾದಕ ವಿ.ಹನುಮಂ ತಪ್ಪ, `ದಾವಣಗೆರೆ ಟೈಮ್ಸ್’ ಸಂಪಾದಕ ವೀರೇಶ್, `ವಿಸ್ಮಯ ವಾಣಿ’ ಸಂಪಾದಕ ವಾಸುದೇವ್, `ಸುಭಾಷಿತ’ ಸಂಪಾದಕ ಡಾ. ಕೆ ಜೈಮುನಿ, `ದಾವಣಗೆರೆ ಕನ್ನಡಿಗ’ ಸಂಪಾದಕ ರವಿ, `ಇಮೇಜ್’ ಸಂಪಾದಕ ಫಕೃದ್ದೀನ್, `ಭುವನೇಶ್ವರಿ’ ಸಹ ಸಂಪಾದಕ ಎನ್.ಆರ್. ರವಿ, `ದಾವಣಗೆರೆ ವೈಭವ’ ಸಂಪಾ ದಕ ಕೃಷ್ಣಮೂರ್ತಿ, `ಪ್ರಥಮ ಹೆಜ್ಜೆ’ ಸಂಪಾದಕ ಮಂಜು ನಾಯಕ್, ಪತ್ರಕರ್ತ ಚಂದ್ರು ಮತ್ತಿತರರು ಹಾಜರಿದ್ದರು.

error: Content is protected !!