ತಗ್ಗಿಹಳ್ಳಿ ಗ್ರಾಮದಲ್ಲಿ ಸಿಲಿಂಡರ್‌ ಸ್ಫೋಟ

ಹೊನ್ನಾಳಿ, ಜೂ.6- ತಾಲ್ಲೂಕಿನ ತಗ್ಗಿಹಳ್ಳಿ ಗ್ರಾಮದಲ್ಲಿ ಮನೆ ಬಳಕೆ ಸಿಲಿಂಡರ್ ಸ್ಫೋಟದಿಂದ ಮನೆಗಳಿಗೆ ಹಾನಿಯಾಗಿದ್ದು, ಘಟನಾ ಸ್ಥಳಕ್ಕೆ ಶಾಸಕ ಎಂ.ಪಿ.ರೇಣುಕಾಚಾರ್ಯ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.

ನರಸಪ್ಪನವರ ಮನೆಯಲ್ಲಿ ಸಿಲಿಂಡರ್ ಸೋರಿಕೆಯಾಗಿ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ನರಸಪ್ಪನವರ ಮನೆಯ ಮೇಲ್ಚಾವಣಿ ಹಾರಿ ಹೋಗಿದ್ದು, ಮನೆಯಲ್ಲಿನ ಪೀಠೋ ಪಕರಣಗಳು ಸೇರಿದಂತೆ ದವಸ ಧಾನ್ಯಗಳು, ಬಟ್ಟೆಗಳೆಲ್ಲಾ ಸುಟ್ಟು ಕರಕಲಾಗಿದ್ದು, ಲಕ್ಷಾಂತರ ರೂ. ನಷ್ಟವಾದೆ. ಅಷ್ಟೇ ಅಲ್ಲದೇ ನರಸಪ್ಪ ಹಾಗೂ ಅವರ ಪತ್ನಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ನರಸಪ್ಪನವರ ಮನೆಗೆ ಹೊಂದಿಕೊಂಡಂತೆ ರುದ್ರೇಶ್ ಅವರ ಮನೆಯೂ ಸ್ಫೋಟದ ತೀವ್ರತೆಗೆ ಗೋಡೆಗಳು ಬಿದ್ದಿವೆ. ಪೀಠೋಪಕರಣಗಳು ಸುಟ್ಟಿವೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದ  ಶಾಸಕರು, ಹಾನಿಗೊಳದ ಕುಟುಂಬಕ್ಕೆ ತಲಾ ಐದು ಸಾವಿರದಂತೆ ಹತ್ತು ಸಾವಿರ ವೈಯಕ್ತಿಕ ಪರಿಹಾರ ನೀಡಿದರು. 

ಈ ಸಂದರ್ಭದಲ್ಲಿ ಗ್ರಾಮಸ್ಥರಾದ ನಾಗೇಶ್, ಬಸವ ರಾಜಪ್ಪ, ಚನ್ನೇಶ್, ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ದೊಡ್ಡೇರಿ ರಾಜಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!