ಹರಿಹರದ ನೇಕಾರ ಬಡಾವಣೆಗೆ ಮೂಲಭೂತ ಸೌಕರ್ಯ ಕಲ್ಪಿಸಲು ಜಿಲ್ಲಾಧಿಕಾರಿಗೆ ಒತ್ತಾಯ

ಹರಿಹರ, ಜೂ.7- ನಗರದ ನೇಕಾರ ಬಡಾವಣೆಗೆ ಕನಿಷ್ಟ ಮೂಲಭೂತ ಸೌಕರ್ಯಗಳಾದ ನೀರು, ವಿದ್ಯುತ್, ರಸ್ತೆ, ಚರಂಡಿ ವ್ಯವಸ್ಥೆಯನ್ನು ಕಲ್ಪಿಸುವಂತೆ ಕೋರಿ ನೇಕಾರ ಸಮಿತಿ ಟ್ರಸ್ಟ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದೆ.

ನೇಕಾರ ಬಡಾವಣೆಯಲ್ಲಿ ಇದೀಗ 11 ಮನೆಗಳು ಸಂಪೂರ್ಣವಾಗಿದ್ದು, ಸುಮಾರು 40 ಮನೆಗಳು ನಿರ್ಮಾಣದ ಹಂತದಲ್ಲಿವೆ. ನೇಕಾರ ಬಡಾವಣೆಗೆ ಹೋಗಿ ಬರಲು ವಿಜಯನಗರ ಬಡಾವಣೆ 2ನೇ ಮೇನ್, 10ನೇ ಕ್ರಾಸ್‌ನಿಂದ ಗಂಗನರಸಿಗೆ ಹೋಗಿ ಬರಲು ಸಂಪರ್ಕ ರಸ್ತೆ ಇದ್ದು, ಈ ರಸ್ತೆಯ ಮಧ್ಯ ಭಾಗದಲ್ಲಿ ಒಬ್ಬರು ಫೌಂಡೇಷನ್ ಹಾಕುವಾಗಲೇ ಸಂಬಂಧಿಸಿದ ಅಧಿಕಾರಿಗಳಿಗೆ ಲಿಖಿತ ದೂರನ್ನು ಅಲ್ಲಿಯ ನಿವಾಸಿಗಳು ನೀಡಿದ್ದರು. ಜೊತೆಗೆ ನೇಕಾರ ಬಡಾವಣೆಯ ನಿವಾಸಿಗಳೂ ಸಹ ದೂರನ್ನು ಸಲ್ಲಿಸಿದ್ದರು.

ಆದರೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳು ಗಮನ ಹರಿಸಿಲ್ಲ. ಇದರಿಂದ ಇತರರಿಗೆ ಅಡಚಣೆಯಾಗಿದೆ. ವಿಜಯ ನಗರ ಬಡಾವಣೆಯಿಂದ ನೇ ಕಾರ ಬಡಾವಣೆಗೆ ಹೋಗಿ ಬರುವ ಸಂಪರ್ಕ ರಸ್ತೆಯನ್ನು ತ್ವರಿತವಾಗಿ ಕಲ್ಪಿಸಿಕೊಡ ಬೇಕೆಂದು ವಿನಂತಿಸಿದ್ದಾರೆ. ಅಲ್ಲಿನ ನಿವಾಸಿಗಳಿಗೆ ನೀರು, ವಿದ್ಯುತ್, ರಸ್ತೆ, ಚರಂಡಿ ವ್ಯವಸ್ಥೆಗಳನ್ನು ತ್ವರಿತವಾಗಿ ಕಲ್ಪಿಸಿಕೊಡಬೇಕೆಂದು ವಿನಂತಿಸಿದ್ದಾರೆ.

ಈಗಾಗಲೇ ಶಾಸಕ ಎಸ್. ರಾಮಪ್ಪ ತಮ್ಮ ಅನುದಾನದಲ್ಲಿ ನೇಕಾರ ಬಡಾವಣೆಯಲ್ಲಿ ಬೋರ್‌ವೆಲ್‌ ಹಾಕಿಸಿ ಕೊಡುವ ವಾಗ್ದಾನ ಮಾಡಿರುವುದು ಪೌರಾಯುಕ್ತರಿಗೂ ತಿಳಿದ ಸಂಗತಿಯಾಗಿದ್ದು, ಪೌರಾಯುಕ್ತರು ವಿದ್ಯುತ್ ಸಂಪರ್ಕ ಕಲ್ಪಿಸಿಕೊಡಲು ಸಂಬಂಧಿಸಿದ ಇಲಾಖೆಗಳಿಗೆ ಪತ್ರ ಕಳಿಸಿರುವ ಮಾಹಿತಿ ನೀಡಿದ್ದಾರೆ. ಲಾಕ್‌ಡೌನ್ ಸಡಿಲಿಕೆಯಾಗಿದ್ದು, ಆದಷ್ಟು ಬೇಗ ಸೌಕರ್ಯ ಕಲ್ಪಿಸುವ ಮೂಲಕ ಬಡಾವಣೆ ವಾಸಿಗಳಿಗೆ ಅನುಕೂಲ ಮಾಡಿಕೊಡಿ ಹಾಗೂ ಸರ್ಕಾರಿ ಸಹಾಯಧನದ ಕಂತಿನ ಹಣ 8 ತಿಂಗಳಿನಿಂದ ಬಂದಿಲ್ಲ. ಇತ್ತ ಗಮನ ಹರಿಸುವಂತೆ  ಸಮಿತಿ ಪರವಾಗಿ ಹೆಚ್.ಕೆ. ಕೊಟ್ರಪ್ಪ ಕೋರಿದ್ದಾರೆ.

error: Content is protected !!