ದಾವಣಗೆರೆ, ಜೂ.5- ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ಎಂ.ಸಿ.ಸಿ. `ಬಿ’ ಬ್ಲಾಕ್ 38ನೇ ವಾರ್ಡಿನಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಸಸಿ ನೆಡುವುದರ ಮೂಲಕ ಪಾಲಿಕೆ ಸದಸ್ಯ ಮಂಜುನಾಥ್ ಗಡಿಗುಡಾಳ್ ನೇತೃತ್ವದಲ್ಲಿ ಆಚರಿಸಲಾಯಿತು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಆರೋಗ್ಯಾಧಿಕಾರಿ ಸಂತೋಷ್ಕುಮಾರ್, ಆರೋಗ್ಯ ನಿರೀಕ್ಷಕ ಮಹಾಂತೇಶ್ ಅವರುಗಳು ವಿವಿಧ ರೀತಿಯ ಸಸಿಗಳನ್ನು ನೆಡುವುದರ ಮೂಲಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಆಲೂರು ಜ್ಯೋತಿರ್ಲಿಂಗ, ಮುರುಗೇಶ್ ಮಂತ್ರಿ, ಕೆ.ವಿ.ಪ್ರಮೋದ್, ಎಸ್.ಎಸ್.ಪ್ರಜ್ವಲ್, ಎಂ. ನಿಖಿಲ್, ಎಸ್.ಎಸ್. ನೀಲಕಂ ಠಪ್ಪ, ಅಮೃತಪ್ಪ, ಬಸವನಗೌಡ್ರು, ಕೃಷ್ಣಮೂರ್ತಿ, ಕೆ.ಬಿ. ಮಂಜುನಾಥ್, ದಫೇ ದಾರ್ ರಮೇಶ್, ಅರವಿಂದ್, ಜಿ.ಎಸ್. ಮನು, ಮತ್ತಿತರರು ಉಪಸ್ಥಿತರಿದ್ದರು.