ಕೋವಿಡ್ ನಿಯಂತ್ರಿಸುವಲ್ಲಿ ಲೋಪವಾದರೆ ಕಠಿಣ ಕ್ರಮ

ದಾವಣಗೆರೆ, ಜೂ. 5 –  ಕೋವಿಡ್ ಎಂಬುದೊಂದು ಯುದ್ದದಂತೆ ಇದ್ದು ಇದನ್ನು ಮೆಟ್ಟಿ ನಿಲ್ಲುವಲ್ಲಿ ನಾವೆಲ್ಲ ಸೇನಾನಿಗಳಂತೆ ಕೆಲಸ ಮಾಡಬೇಕಿದೆ. ಯಾರಾ ದರೂ ಕರ್ತವ್ಯ ಲೋಪ ಎಸಗಿದರೆ ಕೇವಲ ಸಸ್ಪೆಂಡ್ ಅಲ್ಲ, ಬದಲಾಗಿ ವಿಪತ್ತು ನಿರ್ವಹಣೆ ಕಾಯ್ದೆಯಡಿ ಶಿಕ್ಷೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಇಂದು ಏರ್ಪ ಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿ, ವೈದ್ಯರು, ಸಿಬ್ಬಂದಿ ಯಾರಾದರೂ ಸರಿ  ಕರ್ತವ್ಯ ಲೋಪವೆಸಗಿದರೆ ಸುಮ್ಮನೆ ಇರುವುದಿಲ್ಲ. ಜಿಲ್ಲೆಯಲ್ಲಿ ಇದುವರೆಗೆ 6 ಸಾವುಗಳು ಸಂಭವಿಸಿವೆ. ಇದರಲ್ಲಿ ಎರಡು ಪ್ರಕರಣಗಳ ಪೈಕಿ ವೈದ್ಯರು
ಕೈಮೀರಿ ಪ್ರಯತ್ನಪಟ್ಟರೂ

ಉಳಿಸಿಕೊಳ್ಳಲಾಗಿಲ್ಲ. ಆದರೆ ಕೋ ವಿಡ್ ರೋಗಿಯನ್ನು ಗುರುತಿಸು ವಲ್ಲಿ, ನಿಗದಿತ ಆಸ್ಪತ್ರೆಗೆ ತಲುಪಿಸುವಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಿಡಿದು, ಜಿಲ್ಲಾಸ್ಪತ್ರೆ ವೈದ್ಯರವರೆಗೆ ಕರ್ತವ್ಯ ಇರುತ್ತದೆ. ಇಲ್ಲಿ ಕರ್ತವ್ಯಲೋಪವಾದರೆ ಸಹಿಸಲಾಗದು ಎಂದರು.

ಮೊನ್ನೆ ಜಾಲಿನಗರ ಮತ್ತು ಹರಿಹರ ತಾಲ್ಲೂಕಿನ ದೇವರಬೆಳೆಕೆರೆ ವೃದ್ದರನ್ನು ಉಳಿಸಿಕೊಳ್ಳುವಲ್ಲಿ ಲೋಪವಾ ಗಿದೆ. ಜಾಲಿನಗರ ಕಂಟೈನ್‍ಮೆಂಟ್ ಝೋನ್‍ನಲ್ಲಿ ಸಕ್ರಿಯ ಸರ್ವೇಕ್ಷಣೆ ನಡೆಯುತ್ತಿದೆ. ಆದರೂ ಈ ವೃದ್ದೆ ಅಸ್ವಸ್ಥ ರಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ. ದೇವರಬೆಳ ಕೆರೆಯ 83 ವರ್ಷದ ವೃದ್ದೆಯನ್ನು ಆ ಗ್ರಾಮದ ಪಿಹೆಚ್‍ಸಿ ಯವರು ಸಿ.ಜಿ.ಆಸ್ಪತ್ರೆಗೆ ಹೋಗಿರೆಂದು ತಿಳಿಸಿದ್ದಾರೆ. ಆದರೆ ಅವರು ಸಿ.ಜಿ ಆಸ್ಪತ್ರೆ ತಲುಪಿದ್ದಾರೆಂಬ ಬಗ್ಗೆ ಫಾಲೋ ಅಪ್ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕಟ್ಟುನಿಟ್ಟಾಗಿ ಪ್ರತಿದಿನ ಪ್ರಗತಿ ಪರಿಶೀಲಿ ಸುತ್ತಾರೆ. ಅದರಲ್ಲೂ ಸಾವಿನ ಕುರಿ ತಾಗಿ ವಿಚಾರಣೆ ನಡೆಸುತ್ತಾರೆ. ಆದ್ದರಿಂದ ದುರ್ಬಲ ವರ್ಗ ವೆಂದು ಪರಿಗಣಿಸಲ್ಪಡುವ ವಯೋವೃದ್ದರು, ಮಕ್ಕಳು ಸೇರಿ ದಂತೆ ಇತರೆ ಕಾಯಿಲೆಗಳಾದ ಹೃದಯ, ಸಕ್ಕರೆ ಕಾಯಿಲೆ, ಕಿಡ್ನಿ ಸಮಸ್ಯೆ, ಇನ್ನಿತರೆ ಸಮಸ್ಯೆಗಳಿರುವವರ ಪರೀಕ್ಷೆ ನಡೆಯಬೇಕು. ಯಾವುದೇ ದುರ್ಬಲ ವರ್ಗದ ರೋಗಿಗೂ ಕೋವಿಡ್‍ನಿಂದ ಸಾವು ಸಂಭವಿಸದಂತೆ ಕಟ್ಟೆಚ್ಚರ ವಹಿಸಬೇಕೆಂದು ಸೂಚಿಸಿದರು.

ದಾವಣಗೆರೆ ವೈದ್ಯರ ಲೋಕ, ನಮ್ಮಲ್ಲಿ ಮೂರು ಕೋವಿಡ್ ಲ್ಯಾಬ್, ಎರಡು ಮೆಡಿಕಲ್ ಕಾಲೇಜು, ಅತ್ಯುತ್ತಮ ತಜ್ಞ ವೈದ್ಯರು ಇದ್ದಾರೆ. ಇದುವರೆಗೆ 179 ಪ್ರಕರಣಗಳ ಪೈಕಿ 147 ಜನರು ಬಿಡುಗಡೆ ಹೊಂದಿದ್ದಾರೆ. 8 ತಿಂಗಳ ಮಗುವೂ ಸೇರಿದಂತೆ ಅನೇಕ ಹಿರಿಯರು ಚೇತರಿಸಿಕೊಂಡು ಬಿಡುಗಡೆ ಹೊಂದಿದ್ದಾರೆ. ಪ್ರಸ್ತುತ 2.5 ತಿಂಗಳ ಮಗುವಿಗೂ ಚಿಕಿತ್ಸೆ ಮುಂದುವರೆದಿದ್ದು ಮಗು ಚೆನ್ನಾಗಿದೆ. ಯಾರೂ ಕೋವಿಡ್ ಬಗ್ಗೆ ಭಯ ಪಡಬೇಕಿಲ್ಲ ಎಂದರು.

ಜೂನ್‍ನಲ್ಲಿ ಕೊರೊನಾ ಹೆಚ್ಚಾಗುವ ಸಂಭವ ಇದ್ದು, ಇದನ್ನು ನಿಯಂತ್ರಿಸುವ ಸವಾಲು ನಮ್ಮೆಲ್ಲರ ಮೇಲಿದೆ. ಶೇ.85 ರಲ್ಲಿ ಲಕ್ಷಣವೇ ಕಾಣದಿರುವುದು ಅಪಾಯಕಾರಿ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಒಂದು ಸಾವು ಸಂಭವಿಸದಂತೆ ವೈದ್ಯಕೀಯ ವಲಯ ಕ್ರಮ ಕೈಗೊಳ್ಳಬೇಕು ಎಂದರು.

ಜಿ.ಪಂ ಸಿಇಓ ಪದ್ಮಾ ಬಸವಂತಪ್ಪ,  ಡಿಹೆಚ್‍ಓ ಡಾ.ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ಜನ್ ಡಾ.ನಾಗರಾಜ್, ಎಡಿಸಿ ಪೂಜಾರ ವೀರಮಲ್ಲಪ್ಪ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಎಎಸ್‍ಪಿ ರಾಜೀವ್, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ದೂಡಾ ಆಯುಕ್ತ ಕುಮಾರಸ್ವಾಮಿ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್ ಹಾಗೂ ಇತರರು ಸಭೆಯಲ್ಲಿದ್ದರು.

error: Content is protected !!