ಹಸಿರಾಗಿಸೋಣ

ಹಸಿರಾಗಿಸೋಣ
ನಾವು ಮತ್ತೆ
ಹಸಿರಾಗಿಸೋಣ.

ಹಬ್ಬಕೆ ಹಬ್ಬದುಂಡೆ
ಮಾಡಿದ ಹಾಗೆ,
ವಿಧವಿಧ ಸಸ್ಯದ
ಬೀಜಗಳಿಗೆ ಮಣ್ಣನ್ನೇ
ಅಂಟು ಮಾಡಿ
ಬೀಜದುಂಡೆ ಕಟ್ಟೋಣ.

ಮಳೆ ಬಂದಾಗ
ಬಯಲು ಜಾಗವ
ನೋಡಿ ಬೀಜದುಂಡೆ
ಎಸೆಯೋಣ.

ವರ್ಷಕ್ಕೊಮ್ಮೆ ಬರುವ
ಪರಿಸರ ದಿನಾಚರಣೆ
ಮನೆ ಹಬ್ಬವಾಗಿ
ಸಂಭ್ರಮಿಸೋಣ.

ನಾವು  ಸಾಲಮರದ ತಿಮ್ಮಕ್ಕ
ವೃಕ್ಷಮಾತೆ ತುಳಸಿಗೌಡರಂತೆನಾವಾಗದಿದ್ದರೂ
ಪ್ರತಿವರ್ಷ ನೆನಪಿಗಾಗಿ
ಮನೆಗೊಂದು ಮರ
ಬೆಳೆಸೋಣ, ದೇಶವನು ಹಸಿರಾಗಿಸೋಣ.


ಜಗದೀಶ ಬಳೆಗಾರ
ಕ್ಷೇತ್ರ ಸಮನ್ವಯಾಧಿಕಾರಿಗಳು
ಹಿರೇಕೆರೂರು.
[email protected]

error: Content is protected !!