ಜಗಳೂರು, ಜೂ. 2 – ತಾಲ್ಲೂಕಿನಾದ್ಯಂತ ನಿನ್ನೆ ರಾತ್ರಿ 197.06 ಮಿ.ಮೀಟರ್ ಮಳೆಯಾಗಿದೆ. ತಾಲ್ಲೂಕಿನ ಆರು ಮಳೆಮಾಪನ ಕೇಂದ್ರಗಳಾದ ಜಗಳೂರು 15.03, ಬಿಳಿಚೋಡು-123.02, ಸಂಗೇನಹಳ್ಳಿ- 16.00, ಚಿಕ್ಕ ಬಂಟನಹಳ್ಳಿ- 15 ಮಿ.ಮೀ. ಹಾಗೂ ಸೊಕ್ಕೆ 28.01ಮಿ.ಮೀ. ಮಳೆಯಾಗಿದೆ. ತಾಲ್ಲೂಕಿನ ಅತೀ ದೊಡ್ಡ ತುಪ್ಪದಹಳ್ಳಿ ಕೆರೆಗೆ ಒಂದೇ ರಾತ್ರಿ ಸುಮಾರು ನಾಲ್ಕು ಅಡಿ ನೀರು ಬಂದಿದೆ. ಈ ಭಾಗದಲ್ಲಿ ಗೋಕಟ್ಟೆ, ಚೆಕ್ ಡ್ಯಾಮ್ ಗಳು ತುಂಬಿಹರಿಯುತ್ತಿವೆ. ಸೊಕ್ಕೆ ಹೋಬಳಿ ಮತ್ತು ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ರೋಹಿಣಿ ಮಳೆ ವ್ಯಾಪಕವಾಗಿ ಬಂದಿದೆ.
July 25, 2024