ಮಲೇಬೆನ್ನೂರು, ಮೇ 30- ಇಲ್ಲಿನ ರೈತ ಸಂಪರ್ಕ ಕೇಂದ್ರದಲ್ಲಿ 2020 ರ ಮುಂಗಾರು ಹಂಗಾಮಿನ ಬಿತ್ತನೆಗೆ ರಿಯಾಯಿತಿ ದರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಣೆ ಶನಿವಾರದಿಂದ ಪ್ರಾರಂಭವಾಗಿದೆ.
ಆಸಕ್ತ ರೈತರು ಬಿತ್ತನೆ ಬೀಜ ಪಡೆಯಲು ಪಹಣಿ, ಆಧಾರ್ ಕಾರ್ಡ್, ಬ್ಯಾಂಕಿನ ಪಾಸ್ ಬುಕ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜಿನ ಫೋಟೋ ಮತ್ತು ಜಾತಿ ಪ್ರಮಾಣ ಪತ್ರ (ಎಸ್ಸಿ-ಎಸ್ಟಿ) ತರಬೇಕೆಂದು ಕೃಷಿ ಅಧಿಕಾರಿ ನಟರಾಜ್, ಸಹಾಯಕ ಕೃಷಿ ಅಧಿಕಾರಿ ಗುಡಿಯವರ್, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ರಾಕೇಶ್ ತಿಳಿಸಿದ್ದಾರೆ