ಹರಿಹರ, ಮೇ 30- ಸ್ಥಳೀಯ ಬೆಂಕಿನಗರ ಆರೋಗ್ಯ ಕೇಂದ್ರದಲ್ಲಿ ವಿಶ್ವ ಮಲೇರಿಯಾ ದಿನಾಚರಣೆಯನ್ನು ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಚಂದ್ರಮೋಹನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಕೆ.ಎಸ್. ಮೀನಾಕ್ಷಿ ಆಗಮಿಸಿದ್ದರು. ಹಿರಿಯ ಆರೋಗ್ಯ ಸಹಾಯಕರಾದ ಎಂ.ವಿ. ಹೊರಕೇರಿ, ಬಿಹೆಚ್‌ಇಓ ಎಸ್.ಹೆಚ್. ಪಾಟೀಲ, ಡಾ. ಕಾವ್ಯ, ಎಲ್‌ಹೆಚ್‌ವಿ ಕಾರ್ಲಿನ್, ಸುಧಾ, ಪದ್ಮ, ನೇತ್ರಾ, ರಾಧಿಕಾ, ಮೇಲ್ವಿಚಾರಕರಾದ ಟಿ.ಬಿ. ಮಂಜುಳಾ, ದಾದಾಪೀರ್, ಪ್ರಶಾಂತ, ಆಶಾ ಕಾರ್ಯಕರ್ತೆಯರು ಹಾಗೂ ಬೆಂಕಿನಗರ ಆರೋಗ್ಯ ಕೇಂದ್ರ ಸಿಬ್ಬಂದಿಗಳು ಹಾಜರಿದ್ದರು.