ದಾವಣಗೆರೆ, ಮೇ 30- ನಗರದ ಫುಟ್ಪಾತ್ ಹೂವಿನ ವ್ಯಾಪಾರಿಗಳಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವಂತೆ ಕೋರಿ ಮಹಾಪೌರರಿಗೆ ಫುಟ್ಪಾತ್ ಹೂವಿನ ವ್ಯಾಪಾರಿಗಳ ಸಂಘವು ಮನವಿ ನೀಡಿತು.
ಲಾಕ್ಡೌನ್ನಿಂದಾಗಿ ವ್ಯಾಪಾರಿಗಳ ಜೀವನ ನಿರ್ವಹಣೆ ಕಷ್ಟವಾಗಿದ್ದು, ಕುಟುಂ ಬಗಳು ಉಪವಾಸ ಬೀಳುವಂತಾಗಿದೆ. ಮುಖ್ಯಮಂತ್ರಿಗಳ ವಿಶೇಷ ಪ್ಯಾಕೇಜ್ನಲ್ಲಿ ಹೂವಿನ ವ್ಯಾಪಾರಿಗಳಿಗೂ ಸ್ಪಂದಿಸಿ, ಸಹಾಯ ಹಸ್ತ ನೀಡಬೇಕೆಂದು ಪಾಲಿಕೆ ಮಹಾಪೌರರಿಗೆ ಮನವಿ ಸಲ್ಲಿಸಿದ್ದಾರೆ.
ಪ್ರಧಾನ ಮಂತ್ರಿಗಳು ಬೀದಿ ಬದಿ ವ್ಯಾಪಾರಸ್ಥರೂ ಸೇರಿದಂತೆ, ಇತರೆ ಬಡ ವರ್ಗದ ಜನರಿಗೆ ಮಂಜೂರು ಮಾಡಿ ರುವ ಸೌಲಭ್ಯಗಳು ಬೀದಿ ಬದಿ ವ್ಯಾಪಾರಸ್ಥರಿಗೆ ದೊರೆಯುವಂತೆ ಮಾಡುವ ಮೂಲಕ ಹೂವಿನ ವ್ಯಾಪಾರಿ ಗಳಿಗೆ ಜೀವನ ನಡೆಸಲು ಅನುಕೂಲವಾ ಗುವಂತೆ ದಾರಿ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹೂವಿನ ವ್ಯಾಪಾರಿಗಳ ಪರವಾಗಿ ತಿಪ್ಪೇಸ್ವಾಮಿ, ಗುಂಡಣ್ಣ, ಅಸ್ಲಂ ಬಾಷಾ, ಟಿ. ಅಜ್ಜೇಶಿ, ರಘು ಕಾಕಡ, ಕರಿಬಸಪ್ಪ, ಉಮೇಶ್, ಪ್ರಕಾಶ್ ಇನ್ನಿತರರು ಇದ್ದರು.