ಇಂದು ಪರ್ವತಾರೋಹಿಗಳ ದಿನ

ಇಂದು ಪರ್ವತಾರೋಹಿಗಳ ದಿನ - Janathavaniವಿಶ್ವದ ಅತ್ಯಂತ ಎತ್ತರದ ಪರ್ವತ 29,029 ಅಡಿಯ  ಮೌಂಟ್ ಎವರೆಸ್ಟನ್ನು ಮೊಟ್ಟ ಮೊದಲಿಗೆ ನ್ಯೂಜಿಲ್ಯಾಂಡ್‌ನ ಎಡ್ಮ್ಂಡ್ ಹಿಲರಿ ಮತ್ತು  ಭಾರತದ ತೇನ್‌ಸಿಂಗ್ 1953 ರಂದು ಏರಿ ದಾಖಲೆ ನಿರ್ಮಿಸಿದವರು. ಅವರು ಬ್ರಿಟನ್ ಪರ್ವತಾರೋಹಿಗಳ ಜೊತೆ ಸೇರಿ ಮೌಂಟ್ ಎವರೆಸ್ಟ್‌ನತ್ತ  ಹೆಜ್ಜೆ ಹಾಕಿದರು. ಇವರಿಗೆ ಸಾಥ್ ನೀಡಿದ್ದು ನೇಪಾಳದ ಷೆರ್ಪಾ ತೇನ್‌ಸಿಂಗ್ ನೋರ್ಕೆ,  ಸಾಹಸ ಸಾಧನೆಯ ಪ್ರತೀಕವಾದ ಎವರೆಸ್ಟ್ ಶಿಖರಾರೋಹಣ ಇಡೀ ಮಾನವ ಕುಲಕ್ಕೆ ಒಂದು ದೊಡ್ಡ ಸ‌ವಾಲಾಗಿತ್ತು. ಸುಮಾರು ವರ್ಷಗಳ ಸತತ ಪ್ರಯತ್ನವಾಗಿ ಅನೇಕ ಸಾವು-ನೋವುಗಳನ್ನು ಅನುಭವಿಸಿ ಕಡೆಗೂ ಮಾನವನು ಪಡೆದ ಸಾಧನೆ ಅತ್ಯಂತ ಮಿಗಿಲಾದದ್ದು. 

ಛಲಗಾರನ ಮುಂದೆ ಎಂತಹ ಪರ್ವತವಿದ್ದರೂ ದಾಟ ಬಲ್ಲೆ ಎನ್ನುವ ನಂಬಿಕೆ ಅವರಲ್ಲಿ ದೃಢವಾಗಿತ್ತು. 1953 ಮೇ 26 ರಂದು ಮೊದಲು 26,000 ಅಡಿ ದಾಟಿದ ಬಳಿಕ ಸಾಗುವ ಎತ್ತರವನ್ನು ಸಾವಿನ ವಲಯ ಎಂದು ಕರೆಯುತ್ತಾರೆ. ಅಲ್ಲಿ ಆಮ್ಲಜನಕ ಅತ್ಯಂತ ಕಡಿಮೆ ಇರುತ್ತದೆ. ಸಿಲಿಂಡರ್ ನೆರವಿನಿಂದ  ಸುಮಾರು 27,900 ಅಡಿಯಷ್ಟು ಮುಟ್ಟಿದ ಇವರು, ಮೇ 29 ರಂದು ಮುಂಜಾನೆ  ಪರ್ವತರೋಹಣವನ್ನು ಮುಂದುವರೆಸಿ 9 ಗಂಟೆಗೆ ದಕ್ಷಿಣ ಶಿಖರವನ್ನು ತಲುಪಿ 40 ಅಡಿ ಎತ್ತರದ  ಬಂಡೆಯನ್ನು ಏರಿ ಬೆಳಿಗ್ಗೆ 11.30 ಕ್ಕೆ ಎವರೆಸ್ಟ್ ಶಿಖರದ ತುದಿಯನ್ನು ತಲುಪಿ ವಿಜಯದ ಕಹಳೆಯನ್ನೂದಿದರು. 

29 ಮೇ 1953 ರಲ್ಲಿ ಹತ್ತಿದ ಹಿಲರಿ ಮತ್ತು ತೇನ್‌ಸಿಂಗ್‌ರ ಪಾಲಾಯಿತು ಜಯ. ಇವರು ಹಿಮಾಲಯದ ತುತ್ತ ತುದಿಯ ಮೇಲೆ ಪಾದಾರ್ಪಣೆ ಮಾಡಿ ನಾವು ಎತ್ತರಕ್ಕೆ ಏರಿದ್ದೇವೆ. ಎಷ್ಟು ಎಂದರೆ ನಮ್ಮ ಮೇಲೆ ಆಕಾಶ ಬಿಟ್ಟರೆ ಎತ್ತರ ಯಾವುದು ಇಲ್ಲ. ಕೊನೆಗೊ ಎವರೆಸ್ಟ್ ನಮ್ಮ ವಶವಾಗಿದೆ. ಮೊದಲ ಬಾರಿಗೆ ಹಿಮಾಲಯ ಶಿಖರಾಗ್ರದಲ್ಲಿ ಪಾದ ಊರಿದಾಗ ಓ ಹೋ- ಅದ್ಬುತ, ಆಹ್ಲಾದಕರ, ಹೆಮ್ಮೆಯ ಪ್ರತೀಕ ಅನೂಹ್ಯ, ಬಹಳಷ್ಟು ಮಂದಿ ಇದನ್ನು ಏರಲು ಏನೆಲ್ಲಾ ಪ್ರಯತ್ನ ಮಾಡಿದ್ದರು. ಕೊನೆಗೊ ಎವರೆಸ್ಟ್ ಒಲೆದಿದ್ದು ನಮಗೆ ಎಂದೆಲ್ಲಾ ಉದ್ಘರಿಸಿದರು. ಕೇವಲ 15 ನಿಮಿಷಗಳು ಮಾತ್ರ ಅವರಲ್ಲಿದ್ದಿದ್ದು, ಕೆಳಗಿಳಿದು ಬಂದ ನಂತರ ಸಾಕ್ಷಾಧಾರಕ್ಕಾಗಿ ಕೆಲವು ಫೋಟೋ ತೆಗೆಯೋಣವೆಂದು ಆಮ್ಲಜನಕದ  ಮುಸುಕು ತೆಗೆದರೆ ರಭಸವಾಗಿ ಬೀಸುತ್ತಿದ್ದ ಶೀತಗಾಳಿಯಿಂದ ಜಾಸ್ತಿ ಹೊತ್ತು ಅಲ್ಲಿರಲಾಗಲಿಲ್ಲ. ಇಡೀ ಮಾನವ ಕುಲವೇ ಹೆಮ್ಮೆ ಪಡುವಂತಹ ಸಾಧನೆ ಮಾಡಿದವರು, ಪ್ರಸ್ತುತ ಕಾಲದಲ್ಲಿ ಲಭ್ಯವಿರುವ ಯಾವ ವಿಶೇಷ ಉಪಕರಣಗಳಿಲ್ಲದೆ ಜೀವವನ್ನೇ ಪಣಕಿಟ್ಟು ಉನ್ನತ ಸಾಧನೆಗೈದು ಇಂದಿಗೆ 29 ಮೇ 2020 ಕ್ಕೆ 67 ವರ್ಷಗಳು ಕಳೆದರೂ ಅವರ ಸಾಧನೆ ಎಂದೂ  ಮರೆಯಲಾಗದು ಈ  ಪರ್ವತಾರೋಹಿಗಳ ದಿನ…


ಎನ್. ಕೆ. ಕೊಟ್ರೇಶ್,
ಹಿಮಾಲಯ ಪರ್ವತಾರೋಹಿ. ದಾವಣಗೆರೆ.
9844206869

error: Content is protected !!