ಮಾನ್ಯರೇ,
ಸಂಘ-ಸಂಸ್ಥೆಗಳಿಗೆ ಅನೇಕಾನೇಕ ಎನ್.ಜಿ.ಓ.ಗಳ ಮುಖೇನ ಆರ್ಥಿಕ ಸಹಕಾರ ನೀಡಿ ಆಯಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಬಯಸುತ್ತಿರುವ ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯಾಪಾರಿಗಳನ್ನು ಕೃಷಿ ಕ್ಷೇತ್ರದ ಸಾಧನೆಗೆ ಬಳಸಿಕೊಂಡು ಕಾರ್ಯನಿರ್ವಹಿಸಿದರೆ ಒಳಿತು ಮತ್ತು ನಿರುದ್ಯೋಗ ನಿವಾರಣೆ ಮಾಡಿದಂತಾಗುತ್ತದೆ.
ಇಲ್ಲದಿದ್ದರೆ ನಿರುದ್ಯೋಗ ನಿವಾರಣೆ ಮಂತ್ರ ಹೇಳುತ್ತಲೇ ನಿರುದ್ಯೋಗ ಸೃಷ್ಟಿಸುವ ಬೖಹತ್ ಎತ್ತರದ ಏಣಿ ಏರಿದಂತಾಗುತ್ತದೆ. ಸ್ವದೇಶಿ ಸ್ವದೇಶಿ ಸ್ವದೇಶಿ ಮಂತ್ರ ಜಪದೊಂದಿಗೆ ದೇಶದಲ್ಲಿ ವಿದೇಶಿಗರ ವ್ಯಾಪಾರ ಬಾವುಟಗಳು ಪ್ರತೀ ಮನೆಯ ಛತ್ತಿನ ಮೇಲೆ ಸರ್ಕಾರವೇ ಹಾರಾಡಿಸಿದಂತಾಗುತ್ತದೆ.
ನಂಬಿಕೆ ಮತ್ತು ವಿಶ್ವಾಸದ ತಪೋವನದಂತಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವ್ಯಾಪಾರಿಗಳ ಕಾನೂನುಗಳನ್ನು ಮತ್ತೊಮ್ಮೆ ಪರಾಮರ್ಶಿಸಿ, ಧನಾತ್ಮಕ ನಿರ್ಧಾರ ತೆಗೆದುಕೊಳ್ಳುವ ಕೆಲಸ ಸರ್ಕಾರದಿಂದಾಗ ಬೇಕು. ಉದ್ಯೋಗ ಸೃಷ್ಟಿ ಎಂಬ ಕನಸಿನ ಉಯ್ಯಾಲೆಯ ವಸ್ತು ಪ್ರದರ್ಶನದಲ್ಲಿ ಹಗ್ಗಗಳ ಸಹಾಯ ಸಹಕಾರವಿಲ್ಲದೇ ಏಕಗಂಟಿನ ಹಗ್ಗದೊಂದಿಗೆ ಉಯ್ಯಾಲೆಯಾಟ ಆಡಿಸಲು ಹೊರಟಂತಿದೆ !. ಏಕ ಗಂಟಿನ ಹಗ್ಗ ಕುತ್ತಿಗೆ ಗಂಟು ! ಆತ್ಮಹತ್ಯೆ ! ಅದು ಎಷ್ಟೋ ಕೂಲಿ, ಹಮಾಲಿ, ಗುಮಾ ಸ್ತರು, ಗಾಡಿ ಹೊಡೆಯುವವರು, ಸಾಗಾಣಿಕೆದಾರರ ಇನ್ನೂ ಹತ್ತಾರು ಕಾಣದ ಎಪಿಎಂಸಿ ಪ್ರಾಂಗಣವನ್ನೇ ಅವಲಂಬಿಸಿರುವ ಶ್ರಮಿಕರ ಜೀವನ-ಜೀವನ ಶೈಲಿ ಯನ್ನು ಭೂತಗನ್ನಡಿಯಲ್ಲಿ ನೋಡುವುದಕ್ಕಿಂತ ಮೈಕ್ರೋ ಸ್ಕೋಪ್‌ನಲ್ಲಿ ನೋಡಿ ಪರಾಮರ್ಶಿಸಲಿ ಎಂಬ ವಿನಮ್ರ ಮನವಿಯೊಂದಿಗೆ…..ನಮ್ಮ ಹಳೆಯ ಪೂರ್ವಜರ ಮುಂದಾಲೋಚನೆಯ ವ್ಯವಸ್ಥೆ ಮತ್ತು ಕುರುಹುಗಳು ಉಳಿಯಬೇಕು-ಉಳಿಸಬೇಕೆಂದರೆ ನಾವುಗಳ ಭಾರತೀಯ ಪುರಾತತ್ವ ಇಲಾಖೆಯೊಂದಿಗೆ ಸಂಪರ್ಕ ಇಟ್ಟುಕೊಂಡರೆ ಒಳಿತು ಎಂಬ ಭಿನ್ನಹದೊಂದಿಗೆ…
– ಕೆ.ಸಿರಾಜ್ ಅಹಮ್ಮದ್, ಸಂತೇಬೆನ್ನೂರು.