ಹರಪನಹಳ್ಳಿ, ಮೇ 29- ಮಹಾರಾಷ್ಟ್ರ ರಾಜ್ಯದ ನಾಗಠಾಣ ಜಿಲ್ಲೆಯಲ್ಲಿ ಶ್ರೀ ರುದ್ರಪಶುಪತಿ ಶಿವಾಚಾರ್ಯ ಸ್ವಾಮೀಜಿ ಅವರ ಹತ್ಯೆಯನ್ನು ಖಂಡಿಸಿ ಹತ್ಯೆಗೆ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ರಾಜಶೇಖರ್ ಮಾತನಾಡಿ, ಶ್ರೀ ರುದ್ರ ಪಶುಪತಿ ಶಿವಾಚಾರ್ಯ ಸ್ವಾಮೀಜಿಯನ್ನು ಹತ್ಯೆ ಮಾಡಿದವರನ್ನು ಪತ್ತೆ ಹಚ್ಚಲು ಹಾಗೂ ಹತ್ಯೆಗೆ ನಿಖರ ಕಾರಣ ಅರಿಯಲು ಸಿಬಿಐ ತನಿಖೆಗೆ ಶೀಘ್ರ ಕ್ರಮ ಜರುಗಿಸಬೇಕು. ಹತ್ಯೆಗೆ ಸಂಬಂಧಪಟ್ಟವರ ಬಗ್ಗೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ವೀರಶೈವ ಪಂಚಮಸಾಲಿ ಸಮಾಜದ ತಾಲ್ಲೂಕು ಅಧ್ಯಕ್ಷ ಪಾಟೀಲ್ ಬೆಟ್ಟನಗೌಡ, ಮಹಾಸಭಾದ ಕಾರ್ಯದರ್ಶಿ ಟಿ.ಹೆಚ್.ಎಂ.ಮಲ್ಲಿಕಾರ್ಜುನ, ಮುಖಂಡರಾದ ಎಸ್.ಎಂ.ಸದ್ಯೋಜಾತಯ್ಯ, ಪೂಜಾರ ಶಶಿಧರ, ಮತ್ತಿಹಳ್ಳಿ ಅಜ್ಜಣ್ಣ, ರೇವನಗೌಡ, ಪೂಜಾರ್ ಮಂಜುನಾಥ, ಬಿ.ಟಿ.ಕೊಟ್ರೇಶ್, ಕಾಶಿನಾಥ, ಕೆ.ಎಂ. ನಾಗರಾಜ್ ಮತ್ತಿತರರಿದ್ದರು.