ದಾವಣಗೆರೆ, ಮೇ 29- ಕಳೆದ 30 ದಿನಗಳಿಂದ ಜಾಲಿನಗರದಲ್ಲಿ ಕೊರೊನಾ ಕಂಟೈನ್ಮೆಂಟ್ ಝೋನ್ ಲಾಕ್ಡೌನ್ನಿಂದ ಜನಜೀವನ ಕಷ್ಟಕರವಾಗಿದ್ದು, ಯಾವುದೋ ಒಂದು ಏರಿಯಾದಲ್ಲಿ ಪಾಸಿಟಿವ್ ಬಂದರೆ ಇಡೀ ಜಾಲಿನಗರವನ್ನೇ ಸೀಲ್ಡೌನ್ ಮಾಡುವುದು ಎಷ್ಟರ ಮಟ್ಟಿಗೆ ಸರಿ ?. ಎಲ್ಲಿ ಪಾಸಿಟಿವ್ ಬಂದಿದೆಯೋ ಅಂತಹ ಮನೆಯಿಂದ 20 ಅಥವಾ 30 ಮನೆಯ ವರೆಗೆ ಮಾತ್ರ ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಿ. ಆದರೆ,
ಇಡೀ ಜಾಲಿನಗರವನ್ನೇ ಬಂದ್ ಮಾಡುವುದರಿಂದ ಎಲ್ಲರೂ ಎಲ್ಲಾ ಕಡೆ ತಿರುಗುವುದರಿಂದಲೇ ಪಾಸಿಟಿವ್ ಕೇಸ್ಗಳು ಇನ್ನೂ ಹೆಚ್ಚಾಗುತ್ತಿವೆ. ಅನಾವಶ್ಯಕವಾಗಿ ಬಂದ್ ಮಾಡಿರುವ ಸ್ಥಳದಲ್ಲಿ ರಸ್ತೆ ತೆರವುಗೊಳಿಸಿ ಎಂದು ಜಾಲಿನಗರದ ನಿವಾಸಿಗಳು ನಗರ ಪಾಲಿಕೆ ಮಹಾಪೌರರಾದ ಬಿ.ಜಿ. ಅಜಯ್ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಚೇತನ, ಶಿವಕುಮಾರ್, 7ನೇ ವಾರ್ಡಿನ ಪಾಲಿಕೆಯ ಸದಸ್ಯ ವಿನಾಯಕ ಪೈಲ್ವಾನ್, 8ನೇ ವಾರ್ಡಿನ ಗಾಯಿತ್ರಿ ಬಾಯಿ, ಎನ್.ಕೆ ಕೊಟ್ರೇಶ್, ಎಸ್.ಐ ನಾಗರಾಜ್, ಶಿವು, ಗಿರೀಶ್, ಸಿದ್ದೇಶ್, ಶೋಭಾ, ಅಂಜಿನಮ್ಮ, ಸರಸ್ವತಿ, ಸುಶೀಲಮ್ಮ ಮತ್ತಿತರರು ಇದ್ದರು.