ನ್ಯಾಯಾಧೀಶರಾದ ಸೋಮಶೇಖರ್ ವರ್ಗ : ಬೀಳ್ಕೊಡುಗೆ

ದಾವಣಗೆರೆ, ಮೇ 28- ನಗರದ ಒಂದನೇ ಹೆಚ್ಚುವರಿ ಸಿವಿಲ್ ನ್ಯಾಯಾ ಲಯ ಹಿರಿಯ ವಿಭಾಗದ ನ್ಯಾಯಾಧೀಶ ರಾದ ಪಿ.ಜೆ.ಸೋಮಶೇಖರ್ ಅವರು ಬೆಂಗಳೂರಿನ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದು, ಜಿಲ್ಲಾ ವಕೀಲರ ಸಂಘದ ವತಿಯಿಂದ ಸಾಮಾಜಿಕ ಅಂತರದಿಂದ ಬೀಳ್ಕೊಡುಗೆ ಕೊಡಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಎನ್.ಟಿ. ಮಂಜುನಾಥ, ನ್ಯಾಯಾಧೀಶರಾದ ಸೋಮಶೇಖರ್ ಅವರ  ಕರ್ತವ್ಯ ನಿಷ್ಠೆ ಹಾಗೂ ಅವರು ನಡೆಸುವ ವಿಚಾರಣೆಯ ರೀತಿ – ನೀತಿ, ಕಾರ್ಯವೈಖರಿಯ ಬಗ್ಗೆ ಗುಣಗಾನ ಮಾಡಿದರು. 

ವಕೀಲರ ಸಂಘದ ಉಪಾಧ್ಯಕ್ಷ ಹೆಚ್.ದಿವಾಕರ್, ಕಾರ್ಯದರ್ಶಿ ಬಿ.ಎಸ್.ಲಿಂಗರಾಜ್, ಸಹ ಕಾರ್ಯ ದರ್ಶಿ ಬಸವರಾಜ್, ಕಾರ್ಯಕಾರಿ ಸಮಿತಿ ಸದಸ್ಯರಾದ ಮಂಜುನಾಥ್, ನರೇಂದ್ರಬಾಬು, ವಕೀಲರುಗಳಾದ ಹೆಚ್.ಎಸ್.ಯೋಗೇಶ್, ಎಲ್.ಶಾಮ್, ಚನ್ನಮಲ್ಲೇಶ್, ರೇವಣಸಿದ್ದಪ್ಪ, ಪ್ರದೀಪ್, ನ್ಯಾಯಾಲಯದ ಆಡಳಿತಾ ಧಿಕಾರಿಗಳಾದ ಶ್ರೀಧರ್ ಮತ್ತು ಮಾರುತಿ ಹಾಗೂ ಶಿರಸ್ತೇದಾರ್‌ರಾದ ಗೋವಿಂದಪ್ಪ, ಕರಿಸಿದ್ದಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!