ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲು ಆಗ್ರಹ

ಜಗಳೂರು, ಮೇ 27- ಬಿತ್ತನೆ ಬೀಜಗಳನ್ನು  ವಿಎಸ್‌ಎಸ್‍ಎನ್ ಗಳಿಗೆ ನೀಡದೆ ಕೃಷಿ ಇಲಾಖೆಯವರೇ ನೇರವಾಗಿ ರೈತರಿಗೆ ಮಾರಾಟ ಮಾಡಬೇಕೆಂದು  ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ  (ಹುಚ್ಚವ್ವನಹಳ್ಳಿ ಮಂಜುನಾಥ್)  ಬಣದ ವತಿಯಿಂದ   ತಾಲ್ಲೂಕಿನ ಹೊಸಕೆರೆ  ರೈತ ಸಂಪರ್ಕ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿ,  ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಲೋಕೇಶ್‌ಗೆ ಮನವಿ ಸಲ್ಲಿಸಿದರು.  

ತಾಲ್ಲೂಕಿನ ಹೊಸಕೆರೆ ಗ್ರಾಮದ ರೈತ ಸಂಪರ್ಕ ಕೇಂದ್ರದ ಮುಂಭಾಗದಲ್ಲಿ ರೈತರು ಪ್ರತಿಭಟನೆ ನಡೆಸಿ, ತಮ್ಮ ಮನವಿಯನ್ನು ಸಲ್ಲಿಸಿದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿಕ್ಕಮಲ್ಲನಹೊಳೆ ಚಿರಂಜೀವಿ ಮಾತನಾಡಿ,  ಮುಂಗಾರು  ಹಂ ಗಾಮು ಆರಂಭವಾಗಿದ್ದು ರೈತರು ಭೂಮಿಯನ್ನು ಹದಮಾಡಿಕೊಂಡು ಬಿತ್ತನೆ ಮಾಡಲು ಸಿದ್ಧತೆ ಮಾಡಿಕೊ ಳ್ಳುತ್ತಿದ್ದಾರೆ. ಆದರೆ ಕೃಷಿ ಇಲಾಖೆ ಯವರು ನೇರವಾಗಿ ಬಿತ್ತನೆ ಬೀಜಗ ಳನ್ನು ರೈತರಿಗೆ  ವಿತರಿಸದೇ ಸೊಸೈ ಟಿಗಳಿಗೆ ವಿತರಿಸುವಂತೆ ಅನುಮತಿ ನೀಡಿರುವುದು ಸರಿಯಲ್ಲ ಎಂದರು.

ಸೊಸೈಟಿಗಳಿಗೆ ನೀಡಿರುವುದ ರಿಂದ ಕೃತಕ ಅಭಾವ ಸೃಷ್ಠಿ ಯಾಗಲಿದೆ. ವಿಳಂಬವಾಗುವುದರ ಜೊತೆಗೆ ದುರುಪಯೋಗವಾಗುವ ಸಂಭವ ಹೆಚ್ಚಾಗಿದೆ. ಆದ್ದರಿಂದ ಕೃಷಿ ಇಲಾಖೆಯವರೇ ರೈತ ಸಂಪರ್ಕ ಕೇಂದ್ರಗಳಲ್ಲಿ ಬಿತ್ತನೆ ಬೀಜಗಳನ್ನು  ವಿತರಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ದೊಣೆಹಳ್ಳಿ ಲೋಕೇಶ್, ಹೊನ್ನೂರು ಸಾಬ್, ಚಂದ್ರಪ್ಪ, ಬಸವರಾಜ್, ಮಡ್ರಳ್ಳಿ ಮಂಜಣ್ಣ,  ಸತೀಶ್,  ವೀರೇಶ್ ಸೇರಿದಂತೆ, ಮತ್ತಿತರರು ಹಾಜರಿದ್ದರು.

error: Content is protected !!