ಮಾನ್ಯರೇ,
ಜಗತ್ತಿನಾದ್ಯಂತ ಕೊರೊನಾ ಮಹಾಮಾರಿ ತಾಂಡವವಾಡುತ್ತಿದೆ. ಈ ಮಹಾಮಾರಿ ಜನಜೀವನವನ್ನು ಸ್ತಬ್ಧಗೊಳಿಸಿರುವುದು ಒಂದಲ್ಲಾ ಒಂದು ರೀತಿ ಒಳ್ಳೆಯದಾಗಿದೆ.
ಕಾರಣ ಆಧುನಿಕ ಯುಗದಲ್ಲಿ ಅತೀ ಹೆಚ್ಚು ವಾಹನಗಳ ಬಳಕೆ, ದುಬಾರಿ ಜೀವನ, ದುಂದು ವೆಚ್ಚಗಳನ್ನು ಮಾಡುತ್ತಾ, ಪ್ರಕೃತಿ ವಿನಾಶದತ್ತ ಕೊಂಡೊಯ್ಯುತ್ತಾ, ಇಂದು ಇಂತಹ ಭೀಕರ ಪರಿಸ್ಥಿತಿ ಅನುಭವಿಸುತ್ತಿದ್ದೇವೆ. ಕೊರೊನಾ ವೈರಸ್ಗೆ ಹೆದರಿ ಮನೆಯಲ್ಲಿ ಕುಳಿತು ಅವಶ್ಯಕ ವಸ್ತುಗಳನ್ನೂ ಸಹ ಕೊಳ್ಳಲಾಗದ ಪರಿಸ್ಥಿತಿಯಲ್ಲಿದ್ದೇವೆ.
ಕುಡಿಯುವ ನೀರನ್ನು ಕಲುಷಿತಗೊಳಿಸಿ, ಯುವಕರನ್ನು ದುಶ್ಚಟ ಗಳಿಗೆ ಒಳಾಗುವಂತೆ ಮಾಡಿದ್ದೇವೆ. ಮಾನವರ ನಡುವಿನ ಸಂಬಂಧ ವನ್ನು ತಿಳಿಯದೇ ಮಾನವೀಯತೆ ಮರೆತಿದ್ದೇವೆ. ಎಲ್ಲಾ ಅನಾಹುತ ಗಳಿಗೆ ನಾವೇ ಕಾರಣವಾಗಿರುವುದರಿಂದ ಪರಿಹಾರವು ನಮ್ಮಿಂದಲೇ ಆಗಬೇಕು. ಪ್ರಸನ್ನ ಅವರು ಕೈಗೊಂಡಿರುವ ರಾಷ್ಟ್ರೀಯ ಉಪವಾಸ ವ್ರತಕ್ಕೆ ನನ್ನ ಬೆಂಬಲವಿದ್ದು, 12 ಗಂಟೆ ಉಪವಾಸ ಮಾಡಲಾಗಿದೆ.
ಶ್ರಮ ಸಹಿತ ಸರಳ ಬದುಕನ್ನು ಶ್ರದ್ಧೆಯಿಂದ ಬಾಳುತ್ತೇನೆ. ಪ್ಲಾಸ್ಟಿಕ್ ವಸ್ತುಗಳನ್ನು ಬಳಸುವುದಿಲ್ಲ. ಹೆಚ್ಚಾಗಿ ವಾಹನಗಳನ್ನು ಬಳಸುವುದಿಲ್ಲ. ಇಂತಹ ಕೆಲವೊಂದು ಪ್ರತಿಜ್ಞೆಗಳನ್ನು ಮಾಡೋಣ. ಹಸಿದವರ ಹೊಟ್ಟೆ ತುಂಬಿಸೋಣ. ಪವಿತ್ರ ಆರ್ಥಿಕತೆಯ ಜಾರಿಯಿಂದ ಮಾತ್ರವೇ ಜನರ ಹಸಿವು ನೀಗಬಲ್ಲದು. ಬನ್ನಿ ಪವಿತ್ರ ಆರ್ಥಿಕತೆಯನ್ನು ಗೆಲ್ಲಿಸೋಣ.
-ಶಿವನಕೆರೆ ಬಸವಲಿಂಗಪ್ಪ