ಕೊರೊನಾ : ನಗರದಲ್ಲಿ ಇನ್ನೂ ಬಿಗಿ ಕ್ರಮ ವಹಿಸಬೇಕಿದೆ

ಮಾನ್ಯರೇ,

ದಾವಣಗೆರೆ ನಗರದಲ್ಲಿ ಕರೋನಾ ತಡೆಯಲು ಇನ್ನು ಬಿಗಿ ಕ್ರಮ ವಹಿಸಬೇಕು. ಅದರಲ್ಲಿ ಬ್ಯಾಂಕ್ ಗಳ‌ ಮುಂದೆ ನಿಲ್ಲುವ ಜನರ ಸಾಮಾಜಿಕ ಅಂತರ, ಮಹಾರಾಷ್ಟ್ರದ ನಾಸಿಕ್ ಅಥವಾ ಇತರೆ ಕಡೆಯಿಂದ ಬರುವ ತರಕಾರಿ, ಈರುಳ್ಳಿ ಲಾರಿಗಳ‌ ಚಾಲಕರ ಆರೋಗ್ಯ ತಪಾಸಣೆ, ದಾವಣಗೆರೆ ನಗರಕ್ಕೆ ಬರುವ ಹಣ್ಣಿನ ಲಾರಿಗಳ‌ ಚಾಲಕರ ಆರೋಗ್ಯ ತಪಾಸಣೆ,  ಬೆಳ್ಳಂಬೆಳಿಗ್ಗೆ  100ಕ್ಕೂ ಹೆಚ್ಚು ಪ್ರಯಾಣಿಕರ ಆಟೋಗಳು ಸಂಚಾರದಿಂದ ನಗರದಲ್ಲಿ ‌ದಟ್ಟಣೆ ಹೆಚ್ಚಾಗುತ್ತಿದೆ.

ಬಾಪೂಜಿ ಆಸ್ಪತ್ರೆಯ ಬಳಿ ಇರುವ ಖಾಸಗಿ ಅಂಬ್ಯುಲೆನ್ಸ್ ಗಳನ್ನು ಪೊಲೀಸ್ ಠಾಣೆಯ ವಶಕ್ಕೆ ನೀಡಿ ತುರ್ತು ಸಮಯದಲ್ಲಿ ನಗರದ ನಾಗರಿಕರಿಗೆ ಸಿಗುವಂತೆ ಮಾಡಬೇಕು. ಅನಗತ್ಯ ವಾಗಿ ಉಚಿತವಾಗಿ ನೀಡುವ ಆಹಾರ ಪೊಟ್ಟಣದ ಸರಬರಾಜುಗಳನ್ನು ನಿಲ್ಲಿಸಬೇಕು. ನಗರದ ಈರುಳ್ಳಿ ‌ಮಾರುಕಟ್ಟೆಯ ಹರಾಜಿನಲ್ಲಿ ಸಾಮಾಜಿಕ ‌ಅಂತರ ಕಾಪಾಡಬೇಕು. ಜಿಲ್ಲಾಡಳಿತವು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.

-ಎಂ.ಜಿ. ಶ್ರೀಕಾಂತ್

error: Content is protected !!