ಮಾನ್ಯರೇ,
ಜಾತಿ, ಧರ್ಮ, ಮತ, ಪಂಥಗಳನ್ನು ಬದಿಗೊತ್ತಿ ಮಾನವ ಜಾತಿ ಒಂದೇ ಎಂಬ ಭಾವನೆಯೊಂದಿಗೆ ಕೊರೊನಾ ತಡೆಯುವ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ನಿರ್ಬಂಧವನ್ನು ಎಲ್ಲರೂ ಗೌರವಿಸೋಣ, ಕಾನೂನು ಪಾಲಿಸೋಣ, ಕೊರೊನಾ ಓಡಿಸೋಣ.
ಲಾಕ್‌ಡೌನ್ ನಿರ್ಬಂಧ ನಿರ್ಧಾರ ಕೈಗೊಂಡಲ್ಲಿ ಮುಂಜಾಗ್ರತೆ ಕ್ರಮವಾಗಿ ನಾಲ್ಕು ದಿನ ಸಾರ್ವಜನಿಕರಿಗೆ ಅಗತ್ಯ ವಸ್ತುಗಳನ್ನು ಖರೀದಿ ಸಲು ಮುಕ್ತ ಅವಕಾಶ ಕಲ್ಪಿಸಿಕೊಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಂಗಡಿಯವರಿಗೆ ನಿರ್ಬಂಧ ಹೇರಬೇಕು. ಕಾನೂನು ಉಲ್ಲಂಘನೆ ಮಾಡದೇ ಸರ್ಕಾರದ ಆದೇಶವನ್ನು ಚಾಚೂ ತಪ್ಪದೇ ಪಾಲಿಸಬೇಕು. ಕೊರೊನಾ ತಡೆಗಟ್ಟುವ ವಿಚಾರದಲ್ಲಿ ಉದಾಸೀನತೆ ಸಲ್ಲದು. ಕೊರೊನಾ ವ್ಯಾಪಕವಾಗಿ ಹರಡಿದರೆ ತಡೆಯಲು ಸಾಧ್ಯವಿಲ್ಲ. ಹೆಣ ಹೂಳಲೂ ಕಷ್ಟವಾಗಲಿದ್ದು, ಸಾಮೂಹಿಕವಾಗಿ ಸುಡುವ ಪ್ರಸಂಗ ಬರಬಹುದು. ಆದ್ದರಿಂದ ಕಾನೂನು ಉಲ್ಲಂಘನೆ ಮಾಡದೆ ಸರ್ಕಾರದ ಆದೇಶ ಪಾಲಿಸೋಣ.
– ಚಿದಾನಂದ, ಗಾಂಧಿ ನಗರ, ದಾವಣಗೆರೆ.