ಹೆಚ್ಚು ದಾನ ಮಾಡಿ, ಸರಳ ರಂಜಾನ್ ಆಚರಣೆ

ಮಲೇಬೆನ್ನೂರು, ಮೇ 25- ಸಮಾನತೆ ಸಾರುವ ಪರಸ್ಪರ ಸಂಬಂಧ, ಬಾಂಧವ್ಯ ಬಲಪಡಿಸುವ ಈದ್-ಉಲ್-ಫಿತರ್ ಹಬ್ಬವನ್ನು ಸೋಮವಾರ ಮಲೇಬೆನ್ನೂರಿನಲ್ಲಿ ಸರಳವಾಗಿ ಆಚರಣೆ ಮಾಡಲಾಯಿತು. 

ಜಗತ್ತಿನಾದ್ಯಂತ ಹರಡಿರುವ ಕೊರೊನಾ ವೈರಸ್‌ನಿಂದಾಗಿ ಪಟ್ಟಣದಲ್ಲೂ ಹಬ್ಬದ ಸಂಭ್ರಮ ಕುಗ್ಗಿತ್ತು. ಆದರೆ, ಉಪವಾಸದ ತಿಂಗಳ ಮತ್ತು ಹಬ್ಬದ ಸ್ಫೂರ್ತಿ ಮಾತ್ರ ಎಳ್ಳಷ್ಟೂ ಕುಂದಿರಲಿಲ್ಲ. 

ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಈ ಬಾರಿ ಹೆಚ್ಚು ಜನರು ಬಡವರಿಗೆ ದಾನ ಮಾಡಿ, ರಂಜಾನ್ ಶುಭಾಶಯ ಕೋರಿದರು. ಲಾಕ್‌ಡೌನ್ ಇರುವುದ ರಿಂದ ಈ ಬಾರಿ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇರಲಿಲ್ಲ. ಮುಸ್ಲಿಂ ಸಮಾಜದ ಮುಖಂಡರೂ ಸಹ ಸರ್ಕಾರದ ಸೂಚನೆಗಳನ್ನು ಎಲ್ಲರೂ ಪಾಲಿಸುವಂತೆ ಮನವಿ ಮಾಡಿದ್ದರು. ಅದರಂತೆ ಪವಿತ್ರ ರಂಜಾನ್ ಹಬ್ಬವನ್ನು ಮುಸ್ಲಿಂ ಬಾಂಧವರು ತಮ್ಮ ಮನೆಗಳಲ್ಲಿಯೇ ಪ್ರಾರ್ಥನೆ ಸಲ್ಲಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು.

ಶಾಸಕ ಎಸ್.ರಾಮಪ್ಪ, ಮಾಜಿ ಶಾಸಕರಾದ ಹೆಚ್.ಎಸ್.ಶಿವಶಂಕರ್, ಬಿ.ಪಿ.ಹರೀಶ್, ಜಿ.ಪಂ. ಸದಸ್ಯರಾದ ಬಿ.ಎಂ. ವಾಗೀಶ್‌ಸ್ವಾಮಿ, ಶ್ರೀಮತಿ ಹೇಮಾವತಿ ಭೀಮಪ್ಪ, ಶ್ರೀಮತಿ ಅರ್ಚನಾ ಬೆಳ್ಳೂಡಿ ಬಸವರಾಜ್, ಜಿ.ಪಂ. ಮಾಜಿ ಸದಸ್ಯರಾದ ಬೆಣ್ಣೆಹಳ್ಳಿ ಹಾಲೇಶಪ್ಪ, ಎಂ.ನಾಗೇಂದ್ರಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಚಿದಾನಂದಪ್ಪ, ಡಿಸಿಸಿ ಬ್ಯಾಂಕಿನ ಮಾಜಿ ಅಧ್ಯಕ್ಷ ಪಿ.ಎಸ್.ಹನುಮಂತಪ್ಪ, ಜಿಗಳಿ ಆನಂದಪ್ಪ, ಎಪಿಎಂಸಿ ನಿರ್ದೇಶಕ ಜಿ.ಮಂಜುನಾಥ್‌ ಪಟೇಲ್, ತಾ. ಜೆಡಿಎಸ್ ಅಧ್ಯಕ್ಷ ಬಂಡೇರ ತಿಮ್ಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ಅಬೀದ್‌ ಅಲಿ, ಮುಖಂಡರಾದ ಎಂ.ಬಿ.ರೋಷನ್, ಸೈಯದ್ ರೋಷನ್, ಎಸ್.ಕೆ.ಅಲ್ತಾಫ್, ರೈಸ್‌ ಮಿಲ್ ಮಾಲೀಕ ಯಕ್ಕನಹಳ್ಳಿ ಬಸವರಾಜಪ್ಪ, ತಳಸದ ಬಸವರಾಜ್, ಬಿ.ವೀರಯ್ಯ, ಡಾ|| ಬಿ.ಚಂದ್ರಶೇಖರ್, ಡಾ|| ಅಪೂರ್ವ ಅವರುಗಳು ಮುಸ್ಲಿಂ ಬಾಂಧವರಿಗೆ ರಂಜಾನ್ ಶುಭಾಶಯ ಕೋರಿದರು.

ರಂಜಾನ್ ಹಬ್ಬವನ್ನು ಆಚರಿಸಿದ ಮುಸ್ಲಿಂ ಬಾಂಧವರನ್ನು ಪಿಎಸ್‌ಐ ಕಿರಣ್‌ಕುಮಾರ್, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರಕುಮಾರ್, ಉಪ ತಹಶೀಲ್ದಾರ್ ರವಿ ಅವರು ಅಭಿನಂದಿಸಿದ್ದಾರೆ.

error: Content is protected !!