ಪ್ರಪಂಚದಲ್ಲೇ ನಮ್ಮ ಭಾರತದಂತಹ ದೇಶ ಇನ್ನೊಂದಿಲ್ಲ. ಏಕೆಂದರೆ ಇದು ನೂರಾರು ಭಾಷೆ, ಹತ್ತಾರು ಧರ್ಮಗಳುಳ್ಳ ದೇಶ. ಇಲ್ಲಿನ ಗಾಳಿ, ಬೆಳಕು, ಪ್ರಕೃತಿಯ ಸೌಂದರ್ಯ ನಮ್ಮ ದೇಶದ ಸೊಬಗನ್ನು ವರ್ಣಿಸುತ್ತಾ ಹೋದರೆ ಪದಗಳೇ ಸಾಲದು. ಇಂತಹ ಒಂದು ದೇಶದಲ್ಲಿ ಹುಟ್ಟಿರುವ ನಾವು ನಿಜಕ್ಕೂ ಅದೃಷ್ಟವಂತರು.
ವಿಶೇಷವಾಗಿ ನಮ್ಮ ದೇಶದಲ್ಲಿ ಬರುವ ಸಾವಿರಾರು ಬಗೆಯ ಗಿಡ-ಮರಗಳ ಗಿಡ ಮೂಲಿಕೆಗಳಿಗೆ ಎಂತಹ ವೈರಸ್ ಬಂದರೂ ಅದನ್ನು ತಡೆಯುವ ಶಕ್ತಿ ಇದೆ. ಈ ಸುಂದರ ದೇಶದಲ್ಲಿ ಸುಮಾರು 130 ಕೋಟಿಗಿಂತಲೂ ಅಧಿಕ ಜನಸಂಖ್ಯೆ ಇದ್ದರೂ, ನಾವುಗಳೆಲ್ಲರೂ ಭಾರತ ಮಾತೆಯ ಒಂದೇ ತಾಯಿಯ ಮಕ್ಕಳಂತೆ ಜೀವನ ಸಾಗಿಸುತ್ತಿದ್ದೇವೆ.
ನಾವು ಹಿರಿಯರು ಹೇಳಿದ ಮಾತುಗ ಳನ್ನು ನಿಜ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಮಾಡುತ್ತಿದ್ದೇವೆ. ಅದರಲ್ಲಿ ಮುಖ್ಯವಾಗಿ `ಹುಟ್ಟುವಾಗ ಉಸಿರು ಇರುತ್ತೆ, ಹೆಸರು ಇರಲ್ಲ’, `ಸತ್ತಾಗ ಉಸಿರು ಇರಲ್ಲ, ಹೆಸರು ಇರಬೇಕು’ ಅಂತಹ ಕೆಲಸವನ್ನು ಮಾಡಬೇಕು, ಮಾಡುತ್ತಿದ್ದೇವೆ.
ಇಂತಹ ಒಂದು ಅದ್ಭುತವಾದ ದೇಶದಲ್ಲಿ ಮಹಾಮಾರಿಯಂತೆ ಬಂದು ದೇಶದೆಲ್ಲೆಡೆ ತಾಂಡವವಾಡುತ್ತಿದೆ ಈ ಕೊರೊನಾ ವೈರಸ್. ಈ ಪ್ರಪಂಚಕ್ಕೆ ನಾನೇ ಹಿರಿಯ, ನಾನೇ ಮುಂದು ಎಂದು ಜಂಬ ಕೊಚ್ಚಿಕೊಳ್ಳುತ್ತಾ ಹಗಲು ಕನಸು ಕಾಣುತ್ತಿರುವ ಪಾಪಿ ದೇಶ ಚೀನಾದಿಂದ ಬಂದಿರುವುದು ಎಂದು ಇಡೀ ಪ್ರಪಂಚಕ್ಕೇ ತಿಳಿದಿರುವ ಸಂಗತಿ.
ಈ ವೈರಸ್‌ನಿಂದ ಪಾಶ್ಚಿಮಾತ್ಯ ದೇಶ ಗಳು ಸಾವು-ನೋವುಗಳಿಂದ ಬಳಲುತ್ತಿವೆ. ಇಂತಹ ಒಂದು ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ನಮ್ಮ ಭಾರತ ದೇಶದ ಪ್ರಧಾನಮಂತ್ರಿಗಳು ತಕ್ಷಣ ನಮ್ಮ ದೇಶವನ್ನು ಲಾಕ್‌ಡೌನ್ ಮಾಡುವುದರ ಮೂಲಕ ಪರಿಸ್ಥಿತಿಯನ್ನು ತಕ್ಕಮಟ್ಟಿಗೆ ತಹಬಂದಿಗೆ ತಂದರು.
ಪ್ರಸ್ತುತ ಬೇರೆ ದೇಶಗಳಿಗೆ ಹೋಲಿಸಿ ದರೆ ನಮ್ಮ ದೇಶವೇ ಕೊರೊನಾ ವೈರಸ್ಸನ್ನು ಕಟ್ಟಿಹಾಕಿದೆ ಎಂದು ಹೇಳಬಹುದು. ವಿಶೇಷ ವಾಗಿ ನಮ್ಮ ದೇಶದಲ್ಲಿ ಕೊರೊನಾ ಎಂಬ ಮಹಾಮಾರಿಯನ್ನು ದೇಶದಿಂದ ಓಡಿಸಲು ಹಗಲಿರುಳು ಕೆಲಸ ಮಾಡುತ್ತಿರುವ ಆರೋಗ್ಯ ಇಲಾಖೆಯವರು ಹಾಗೂ ಸಿಪಾಯಿಗಳಂತೆ ಕೆಲಸ ಮಾಡುತ್ತಿರುವ ಪೊಲೀಸ್ ಇಲಾಖೆ ಯವರ ಬಗ್ಗೆ ಬಣ್ಣಿಸಲು ಪದಗಳೇ ಸಾಲವು. ದೇವರು ಇವರಿಗೆ, ಇವರ ಕುಟುಂಬ ವರ್ಗ ದವರಿಗೆ ಆಯುಷ್ಯ, ಆರೋಗ್ಯ ಕರುಣಿಸಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.
ಏನೇ ಆಗಲಿ ದೇಶದ ಜನತೆ ಇವರ ಜೊತೆಗಿದೆ. ಕೊರೊನಾ ಎಂಬ ವೈರಸ್‌ನಿಂದ ಗೆದ್ದೇ ಗೆಲ್ಲುತ್ತೇವೆ, ಒಂದು ದಿನ ಗೆಲ್ಲಲೇಬೇಕು ನಮ್ಮ ಒಳ್ಳೆತನ. ಪ್ರಸ್ತುತ ನಮ್ಮ ದೇಶದಲ್ಲಿರುವ ಬಡವರು, ಕೂಲಿ ಕಾರ್ಮಿಕರು, ಮಧ್ಯಮ ವರ್ಗದವರು ಈ ಲಾಕ್‌ಡೌನ್ ಆದ ಮೇಲೆ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಇದ್ದಾರೆ. ಇಂತವರಿಗೆ ಉತ್ತಮವಾಗಿರುವ, ಶ್ರೀಮಂತರು, ದಾನಿಗಳು ಸಹಾಯ ಹಸ್ತ ನೀಡಬೇಕು. ಹಿರಿಯರು ಹೇಳಿದ ಮಾತಿಗೆ ತಕ್ಕಂತೆ ನಡೆಯಲು ಇದು ಸೂಕ್ತ ಅವಕಾಶ.
`ನೀವು ಸಂತಸದಲ್ಲಿ ಇದ್ದಾಗ ನಿಮ್ಮ ಜೀವನ ಎಷ್ಟು ಸುಂದರವಾಗಿರುತ್ತದೆ’. ನಿಮ್ಮ ಸಂತಸವನ್ನು ಇನ್ನೊಬ್ಬರ ಜೊತೆ ಹಂಚಿ ಕೊಂಡಾಗ ನಿಮ್ಮ ಜೀವನ ಇನ್ನೂ ಸುಂದರವಾಗಿರುತ್ತದೆ. ಅಂತಹ ಜೀವನ ನಿಮ್ಮದಾಗಲಿ. ಈ ಮಾತುಗಳು ಅರ್ಥಪೂರ್ಣವಾಗಲು ಸೂಕ್ತ ಸಮಯ. ನಮ್ಮ ದೇಶದ ಜನರು ಹಿಂದೆಂದೂ ನೋಡರಿಯದ, ಕೇಳರಿಯದ ಕೊರೊನಾ ಎಂಬ ವೈರಸ್‌ನಿಂದ ಬಳಲಿದೆ. ಆದಷ್ಟು ಬೇಗ ಇದರಿಂದ ಮುಕ್ತರಾಗೋಣ ಎಂದು ದೇವರಲ್ಲಿ ಪ್ರಾರ್ಥಿಸೋಣ. ವಿಶೇಷವಾಗಿ ಈ ಕೊರೊನಾದಿಂದ ಮೃತಪಟ್ಟವರಿಗೆ, ರೈಲು ಅಪಘಾತದಲ್ಲಿ ಮೃತಪಟ್ಟವರಿಗೆ, ವಿಶಾಖಪಟ್ಟಣದ ವಿಷ ಅನಿಲದಿಂದ ಮೃತಪಟ್ಟವರಿಗೆ ದೇವರು ಇವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಇವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸೋಣ.
ನಮ್ಮ ನಾಡಿನ ಹೆಸರಾಂತ ಕವಿ ಪ್ರೊ. ನಿಸಾರ್ ಅಹಮದ್ ಇವರೂ ಸಹ ನಮ್ಮೆಲ್ಲರನ್ನು ಬಿಟ್ಟು ಅಗಲಿದ್ದಾರೆ. ದೇವರು ಇವರ ಆತ್ಮಕ್ಕೆ ಶಾಂತಿ ದೊರಕಿಸಲಿ. ಇವರ ಕುಟುಂಬ ವರ್ಗದವರಿಗೆ ಸಾವಿನ ದುಃಖವನ್ನು ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸೋಣ.
ನಮ್ಮ ದೇಶದ ಪ್ರತಿಯೊಬ್ಬರೂ ವಿಶೇಷವಾಗಿ ಯುವಕರು ತಾಳ್ಮೆ ಕಳೆದುಕೊಳ್ಳ ಬಾರದು. ಈ ಕೊರೊನಾ ವೈರಸ್‌ನಿಂದ ಆದಷ್ಟು ಬೇಗ ಮುಕ್ತರಾಗುತ್ತೇವೆ. ನಮ್ಮ ರಾಜ್ಯ, ನಮ್ಮ ದೇಶ ಯಥಾಸ್ಥಿತಿಗೆ ಬಂದು ಹಸಿರಿನಿಂದ ಕಂಗೊಳಿಸುತ್ತದೆ.
ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನು ಯಶಸ್ವಿಯ ಮೆಟ್ಟಿಲುಗಳನ್ನು ಹುಡುಕುತ್ತಾ ಹೊರಟಾಗ ಕೊರೊನಾ ವೈರಸ್ ಬಂದು ನಮಗೆ ಹೆದರಿಸುತ್ತಿದೆ. ಅದಕ್ಕೆ ಹೆದರದೆ ಮುನ್ನುಗ್ಗುವುದೇ ಜೀವನ.
– ಅಸ್ಗರ್ ಅಹ್ಮದ್, ಕೆ ಖಯ್ಯಮ್,
ಸಮಾಜ ಸೇವಕರು,
ಭಗತ್‌ಸಿಂಗ್ ನಗರ, ದಾವಣಗೆರೆ.
ಮೊಬೈಲ್ : 97439 78754