ಸುಳ್ಳು ಸುದ್ದಿ ಹರಡಿದವರ ವಿರುದ್ಧ ತನಿಖೆಗೆ ಮುಸ್ಲಿಂ ಚಿಂತಕರ ಆಗ್ರಹ

ಹರಿಹರ, ಮೇ 23- ರಂಜಾನ್‌ಗೆ ಬಟ್ಟೆ ಖರೀದಿ ವಿಷಯದಲ್ಲಿ ಸುಳ್ಳು ಸುದ್ದಿ ಹರಡುತ್ತಿರುವ ಪಟ್ಟಭದ್ರ ಹಿತಾಸಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಪಟ್ಟಣದ ಮುಸ್ಲಿಂ ಹಿತಚಿಂತಕರು ಜಿಲ್ಲಾಧಿಕಾರಿಗಳಿಗೆ ಮನವಿ ಮೂಲಕ ಆಗ್ರಹಿಸಿದ್ದಾರೆ.

  ಬಾರಿ ರಂಜಾನ್‌ಗೆ ಬಟ್ಟೆ-ಬರೆ ಖರೀದಿಸಬೇಡಿ ಎಂದು ಹೇಳಲಾಗಿದೆಯೇ ಹೊರತು, ಅನ್ಯ ಧರ್ಮೀಯರ ಅಂಗಡಿಗಳಲ್ಲಿ ಖರೀದಿ ಮಾಡಬೇಡಿ ಎಂದು ಹೇಳಿಲ್ಲ. ಆದಾಗ್ಯೂ ಹರಿಹರ-ದಾವಣಗೆರೆಯಲ್ಲಿ ಯಾವ ಮುಸ್ಲಿಮರಿಗೂ ಸೇರಿದ ದೊಡ್ಡ ಬಟ್ಟೆ ಅಂಗಡಿಗಳು ಇಲ್ಲ. ಕೋಮುವಾದಿಗಳ ಸುಳ್ಳು ಆರೋಪ ಹಾಗೂ ಇದನ್ನು ಕಣ್ಣು ಮುಚ್ಚಿ ಪ್ರಸಾರ ಮಾಡಿದ ಮಾಧ್ಯಮಗಳ ಸುದ್ದಿಯನ್ನು ಆಧರಿಸಿ ಹರಿಹರ-ದಾವಣ ಗೆರೆಯ ಕೆಲವು ಯುವಕರ ವಿರುದ್ಧ ದೂರನ್ನು ದಾಖಲಿಸಲಾಗಿದೆ. ಕೊರೊನಾ ತಡೆಯಲು ಮುಂದಾಗಿರುವ ಮುಸ್ಲಿಂ ಧರ್ಮೀಯರ ವಿರುದ್ಧ ಕೋಮುವಾದಿಗಳು ಸಮಾಜದಲ್ಲಿ ಸುಳ್ಳು ಆರೋಪ ಮಾಡುತ್ತಿದ್ದಾರೆ.

ಈ ಸಂಬಂಧ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಪರಿಪೂರ್ಣವಾಗಿ ತನಿಖೆ ಮಾಡಬೇಕು. ವಿನಾಕಾರಣ ಸುಳ್ಳು ಆರೋಪ ಮಾಡಿರುವ ಕೋಮುವಾದಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ಅಮಾಯಕ ಯುವಕರ ವಿರುದ್ಧ ದಾಖಲು ಮಾಡಿರುವ ದೂರುಗಳನ್ನು ವಜಾ ಮಾಡಬೇಕೆಂದು  ಜೆ. ಕಲೀಂ ಬಾಷಾ, ಸಯ್ಯದ್ ನೂರ್, ಸಮಾಜ ಸೇವಕ ಬಿ. ಮಗ್ದುಮ್ ಇನ್ನಿತರರು ಮನವಿ ಮೂಲಕ ಒತ್ತಾಯಿಸಿದ್ದಾರೆ.

error: Content is protected !!