5 ಸಾವಿರಕ್ಕೂ ಹೆಚ್ಚು ಜೀವ ವೈವಿಧ್ಯತೆ

ಮಲೇಬೆನ್ನೂರಿನಲ್ಲಿ ಪುರಸಭೆಯಲ್ಲಿ  ವಿಶ್ವ ಜೀವ ವೈವಿಧ್ಯ ದಿನಾಚರಣೆ

ಮಲೇಬೆನ್ನೂರು, ಮೇ 23- ಇಲ್ಲಿನ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಜೀವ ವೈವಿಧ್ಯ ನಿರ್ವಹಣಾ ಸಮಿತಿ ಹಾಗೂ ಪುರಸಭೆ ವತಿಯಿಂದ ವಿಶ್ವ ಜೀವ ವೈವಿಧ್ಯ ದಿನಾ ಚರಣೆಯನ್ನು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.

ಜೀವ ವೈವಿಧ್ಯ ನಿರ್ವಹಣಾ ಸಮಿತಿ ಸದಸ್ಯರೂ, ಸಸ್ಯ ಜೀವಿಗಳ ಆಸಕ್ತರೂ ಆದ ಜ್ಯೋತಿ ನಾಗಭೂಷಣ್ ಅವರು ಕಾರ್ಯಕ್ರಮ ದಲ್ಲಿ ಮಾತನಾಡಿ, ಅಂತರರಾಷ್ಟ್ರೀಯ ಪರಿಸರ ಅಧ್ಯಾ ಯನ ಸಂಸ್ಥೆ ಪ್ರಸ್ತಾಪಿಸಿರುವ ಕೆಂಪು ಪಟ್ಟಿಯಲ್ಲಿನ 16 ಕ್ಕೂ ಹೆಚ್ಚು ಸಸ್ಯ ಮತ್ತು ಜೀವಿ ಗಳನ್ನು ಗುರುತಿಸಲಾಗಿದೆ.

2014 ರಿಂದ 2020 ರವರೆಗೆ ಮಲೇ ಬೆನ್ನೂರು ಹಾಗೂ ಸುತ್ತಮುತ್ತಲಿನ 5 ಸಾವಿರಕ್ಕೂ ಹೆಚ್ಚು ಜೀವ ವೈವಿಧ್ಯ ದಾಖಲಾತಿ ಗಳನ್ನು ವೈಜ್ಞಾನಿಕವಾಗಿ ದಾಖಲು ಮಾಡಿರುವ ಬಗ್ಗೆ ನಾಗಭೂಷಣ್ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜೀವ ವೈವಿಧ್ಯ ಕುರಿತು ಆಸಕ್ತರು ಕೇಳಿದ ಹತ್ತಾರು ಪ್ರಶ್ನೆಗಳಿಗೆ  ಅವರು ಉತ್ತರ ನೀಡಿದದರು.

ಉಪತಹಶೀಲ್ದಾರ್‌ ರವಿ ಮಾತನಾಡಿ, ಮಲೇಬೆನ್ನೂರಿನಲ್ಲೂ ಜೀವ ವೈವಿಧ್ಯ ಕುರಿತು ಅಧ್ಯಯನ ಮಾಡಿರುವವರು ಇರುವ ವಿಷಯ ತಿಳಿದು ಬಹಳ ಸಂತೋಷವಾಯಿತು. ಇಂತಹ ಅಪರೂಪದ ಕಾರ್ಯಕ್ರಮಗಳನ್ನು ಆಗಾಗ ಮಾಡೋಣ ಎಂದರು.

ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್ ಮಾತನಾಡಿ, ಸಸ್ಯ ಮತ್ತು ಜೀವಿಗಳ ಕುರಿತು ಆಸಕ್ತಿ ವಹಿಸಿ ಕೆಲಸ ಮಾಡುತ್ತಿರುವ ನಾಗಭೂಷಣ್ ಅವರಿಗೆ ಪುರಸಭೆಯಿಂದ ಅಗತ್ಯ ಸೌಲಭ್ಯ ನೀಡುವುದಾಗಿ ಹೇಳಿದರು.

ಸಮಿತಿ ಸದಸ್ಯರಾದ ಜ್ಯೋತಿ ಡಾ. ಚಂದ್ರಶೇಖರ್, ಆದಾಪುರ ವಿಜಯಕುಮಾರ್‌, ಮುದೇಗೌಡ್ರ ಬಸವರಾಜಪ್ಪ, ಪರಿಸರ ಇಂಜಿನಿಯರ್ ಉಮೇಶ್, ಆರೋಗ್ಯಾಧಿಕಾರಿ ಗುರುಪ್ರಸಾದ್, ನವೀನ್ ಭಾಗವಹಿಸಿದ್ದರು. 

ನಂತರ ನಾಗಭೂಷಣ ಅವರು ತಮ್ಮ ಕ್ಯಾಮಾರಾದಲ್ಲಿ ಸೆರೆ ಹಿಡಿದಿರುವ ಜೀವ ವೈವಿಧ್ಯಗಳನ್ನು ಲ್ಯಾಪ್‌ಟಾಪ್‌ನಲ್ಲಿ ತೋರಿಸಿದರು.

error: Content is protected !!