ಮುಸ್ಲಿಂ ಬಾಂಧವರಿಗೆ ಶಾಸಕ ಕರುಣಾಕರ ರೆಡ್ಡಿ ಹಣ್ಣು ವಿತರಣೆ

ಹರಪನಹಳ್ಳಿ, ಮೇ 22- ಪಟ್ಟಣದ 27ನೇ ವಾರ್ಡ್‌ ಗಾಜಿಕೇರಿಯಲ್ಲಿ ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಪುರಸಭೆಯಿಂದ 200ಕ್ಕೂ ಹೆಚ್ಚು ಮುಸ್ಲಿಂ ಬಾಂಧವರ ಕುಟುಂಬಗಳಿಗೆ ಸೀಬೆಹಣ್ಣು ಹಾಗೂ ಖರ್ಜೂರದ ಪ್ಯಾಕೆಟ್‌ಗಳನ್ನು ನೀಡಲಾಯಿತು. ಪುರಸಭೆ ಸದಸ್ಯ ದ್ಯಾಮಜ್ಜಿ ರೊಕ್ಕಪ್ಪನವರು ನೀಡಿದ್ದ ಹಣ್ಣುಗಳನ್ನು ಸಾಂಕೇತಿಕವಾಗಿ 5 ಕುಟುಂಬಗಳಿಗೆ ಶಾಸಕ ಜಿ. ಕರುಣಾಕರ ರೆಡ್ಡಿ ವಿತರಿಸಿ ಮಾತನಾಡಿ, ಕೊರೊನಾ ಅಟ್ಟಹಾಸ ವಿಶ್ವದಾದ್ಯಂತ ಹೆಚ್ಚಾಗಿದ್ದು, ಮುಸ್ಲಿಂ ಬಾಂಧವರು  ಮನೆಯಲ್ಲಿಯೇ ಇದ್ದು ಸರಳವಾಗಿ ರಮ್ಜಾನ್‌ ಆಚರಿಸುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯ  ದ್ಯಾಮಜ್ಜಿ ರೊಕ್ಕಪ್ಪ, ಡಿವೈಎಸ್‌ಪಿ ಮಲ್ಲೇಶ್ ದೊಡ್ಡಮನಿ, ಸಿಪಿಐ ಕೆ. ಕುಮಾರ್, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಮಂಜಾನಾಯ್ಕ್, ಬಿಜೆಪಿ ತಾಲ್ಲೂಕು ಅಧ್ಯಕ್ಷ ಸತ್ತೂರು ಹಾಲೇಶ್, ಉಪಾಧ್ಯಕ್ಷ ನಿಟ್ಟೂರು ಸಣ್ಣ ಹಾಲಪ್ಪ, ಬಿಜೆಪಿ ಎಸ್ಟಿ ಘಟಕದ ತಾಲ್ಲೂಕು ಅಧ್ಯಕ್ಷ ಆರ್. ಲೋಕೇಶ್, ಬಾಗಳಿ ಕೊಟ್ರೇಶಪ್ಪ, ಪುರಸಭೆ ಸದಸ್ಯ ಜಾವೀದ್, ಮುಖಂಡರಾದ ಎಂ.ಪಿ. ನಾಯ್ಕ್, ಯಡಿಹಳ್ಳಿ ಶೇಖರಪ್ಪ, ಎಂ. ಮಲ್ಲೇಶ್, ಕರೇಗೌಡ, ರಾಘವೇಂದ್ರ ಶೆಟ್ಟಿ, ಯು.ಪಿ. ನಾಗರಾಜ್, ಕೋರಿಶೆಟ್ಟಿ ರಾಘವೇಂದ್ರ, ಶಬ್ಬೀರ್, ಅನ್ಸರ್, ಸಾಹೀರ್, ಸಲ್ಮಾನ್, ಹನೀಫ್, ಸಮೀವುಲ್ಲಾ, ಮಾಬುಸಾಬ್, ಯು.ಪಿ. ನಾಗರಾಜ್, ರಾಘವೇಂದ್ರ ಶೆಟ್ಟಿ, ಸಂತೋಷ್, ಕೃಷ್ಣ, ಯಡಿಹಳ್ಳಿ ಶೇಖರಪ್ಪ, ತೆಲಿಗಿ ಈಡಿಗರ ಅಂಜಿನಪ್ಪ, ಇನ್ನಿತರರಿದ್ದರು.

error: Content is protected !!