ಪರೀಕ್ಷಾ ಶುಲ್ಕ ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ

ಮಾನ್ಯರೇ,

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಬಿಡುಗಡೆಯಾದ ಬೆನ್ನಲ್ಲೆ, ಸ್ನಾತಕೋತ್ತರ ಪರೀಕ್ಷೆಗಳ ಶುಲ್ಕದ ಪ್ರಕಟಣೆಯನ್ನು ವಿಶ್ವವಿದ್ಯಾನಿಲಯ ಪ್ರಕಟಿಸಿದೆ.

ಸತತವಾಗಿ 55 ದಿಗಳಿಂದ ದುಡಿಮೆಯಿಲ್ಲದೆ ಮನೆಯಲ್ಲೇ ಇರುವುದು ದೇಶಕ್ಕೆ ಗೊತ್ತಿದೆ. ಒಪ್ಪೊತ್ತಿನ ಊಟಕ್ಕಾಗಿ ಹೋರಾಟ ಮಾಡುವ ಇಂತಹ ಪರಿಸ್ಥಿತಿಯಲ್ಲಿ ಶುಲ್ಕವೆಂದರೆ ವಿದ್ಯಾರ್ಥಿಗಳ ಪಾಡು ಏನಾಗಬೇಡ. ಪೋಷಕರು ಕೋವಿಡ್ ಮಹಾಮಾರಿಯ ಭಯದಲ್ಲಿ ನಮ್ಮ ಮಕ್ಕಳ ಜೀವ ಉಳಿದರೆ ಸಾಕು ಮುಂದಿನ ವರ್ಷ ಪರೀಕ್ಷೆ ಬರೆಯಲಿ ಎಂಬ ನಿಲುವನ್ನು ಗ್ರಾಮೀಣ ಪ್ರದೇಶದ ಮನೆಗಳಲ್ಲಿ ಕೇಳುತ್ತಿದ್ದೇವೆ.

ಇಂತಹ ಸಂದರ್ಭದಲ್ಲಿ ಸರ್ಕಾರ ವಿದ್ಯಾರ್ಥಿಗಳ ಆರ್ಥಿಕ ಸ್ಥಿತಿಗತಿಯ ಕಡೆಗೂ ಯೋಚಿಸಬೇಕಾಗಿ ವಿನಂತಿಸಿಕೊಳ್ಳುತ್ತಿದ್ದೇವೆ.

-ಟಿ.ಎಸ್. ಪ್ರೀತಿ, ದಾವಣಗೆರೆ ವಿವಿ, ದಾವಣಗೆರೆ.

error: Content is protected !!