ದಾವಣಗೆರೆ, ಏ.15- ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಡಾ. ಬಿ.ಆರ್. ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಕೊರೋನಾದಿಂದಾಗಿ ಸರ್ಕಾರದ ಆದೇಶದಂತೆ ಸರಳವಾಗಿ ಆಚರಿಸಲಾಯಿತು. ಜಯಂತಿ ಅಂಗವಾಗಿ ಕಾಲೇಜಿನ ಪ್ರಾಂಶುಪಾಲ ತೂ.ಕ. ಶಂಕರಯ್ಯ ಅವರು ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಪ್ರೊ. ಭೀಮಣ್ಣ ಸುಣಗಾರ, ಪ್ರೊ. ವೀರೇಶ್, ಪ್ರೊ. ಗೌರಮ್ಮ, ಪ್ರೊ. ದಿನೇಶ್, ಹನುಮಂತಯ್ಯ, ಚಂದ್ರಪ್ಪ ಇದ್ದರು.
December 26, 2024