ಹರಪನಹಳ್ಳಿ, ಏ.24- ವೃತ್ತಿಪರ ಶಾಮಿಯಾನ ಡೆಕೋರೇಟರ್ಸ್ ಧ್ವನಿ ಮತ್ತು ಬೆಳಕು ಮಾಲೀಕರು ಮತ್ತು ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿ, ತಾಲ್ಲೂಕು ಶಾಮಿಯಾನ ದೀಪಾಲಂಕಾರ ಮತ್ತು ಧ್ವನಿ ವರ್ಧಕ ಸಂಯೋಜಕರ ಕ್ಷೇಮಾಭಿವೃದ್ಧಿ ಒಕ್ಕೂಟದ ವತಿಯಿಂದ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಕೆ. ಅಬ್ದುಲ್ ಕರೀಂ, ಕಾರ್ಯದರ್ಶಿ ರಾಜೇಂದ್ರ ಹಾಗೂ ಸಂಘಟನಾ ಕಾರ್ಯದರ್ಶಿ ಎಂ. ಮಾರುತಿ ಮಾತನಾಡಿ, ಮಾಲೀಕರ ಹಾಗೂ ಕಾರ್ಮಿಕರ ಸಮಸ್ಯೆಗಳ ಕುರಿತು ತಿಳಿಸಿದರು. ಶೀಘ್ರವೇ ಮಾಲೀಕರು ಹಾಗೂ ಕಾರ್ಮಿಕರಿಗೆ ಆರ್ಥಿಕ ನೆರವು ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಕೆ.ಜಿ.ಎನ್. ಇಮ್ರಾನ್, ಖಜಾಂಚಿ ಕರಿಬಸಪ್ಪ ಮೈದೂರು, ಇಮಾಮ್ ಸಾಬ್, ಮಲ್ಲಪ್ಪ, ಸಲಾಂ, ಶಬೀರ್, ಸಲೀಂಸಾಬ್, ನಯಾಜ್, ಕರೀಂ ಸಾಬ್, ಲಕ್ಯಾ ನಾಯ್ಕ್, ಸಕ್ರಪ್ಪ, ಕೊಟೇಪ್ಪ ಸೇರಿದಂತೆ ಇತರರು ಹಾಜರಿದ್ದರು.