ಹರಿಹರ, ಏ. 23- ಲಾಕ್‌ಡೌನ್‌ನಿಂದಾಗಿ ದುಡಿಮೆ ಇಲ್ಲದೆ ತೀವ್ರ ಸಮಸ್ಯೆ ಎದುರಿಸುತ್ತಿರುವ ನಗರದ ಆಟೋ ಚಾಲಕರ ಕುಟುಂಬಗಳಿಗೆ ಸೋನಿಯಾ ಗಾಂಧಿ ಬ್ರಿಗೇಡ್ ಕರ್ನಾಟಕ ರಾಜ್ಯ ಅಧ್ಯಕ್ಷೆ ಗೀತಾ ಕದರಮಂಡಲಗಿ ಅವರು ಫುಡ್ ಕಿಟ್ ನೀಡಿದರು. ಅಲ್ಲದೇ ವಿವಿಧ ಬಡಾವಣೆಗಳಲ್ಲಿರುವ ಕಡು ಬಡವರಿಗೂ ಅಗತ್ಯ ವಸ್ತುಗಳನ್ನು ನೀಡಿ, ಗೀತಾ ಅವರು ಮಾನವೀಯತೆ ಮೆರೆದಿದ್ದಾರೆ. ನಗರಸಭೆ ಸದಸ್ಯೆ ಶಾಹಿನಾ ದಾದಾಪೀರ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಎಸ್.ಎಂ. ಭಾಷಾ ಅವರು ಗೀತಾ ಅವರಿಗೆ ಸಾಥ್ ನೀಡಿದರು.
December 25, 2024