ದಾವಣಗೆರೆ, ಮೇ 17- ನಗರ ಪಾಲಿಕೆ ವ್ಯಾಪ್ತಿಯ 43ನೇ ವಾರ್ಡಿನ ಹೊಸ ಕುಂದುವಾಡ ಗ್ರಾಮದಲ್ಲಿ ಇಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಆಶ್ರಯದಲ್ಲಿ ಪಾಲಿಕೆ ಸದಸ್ಯ ಕಲ್ಲಳ್ಳಿ ನಾಗರಾಜ್ ಅವರು 450ಕ್ಕೂ ಹೆಚ್ಚು ಅಗತ್ಯ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ಲಾಕ್ ಡೌನ್ ಪರಿಣಾಮ ಸಂಕಷ್ಟದಲ್ಲಿರುವ ಬಡ ಕುಟುಂಬಗಳಿಗೆ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಳ್ಳಾರಿ ಲೋಕೇಶ್, ಹನುಮಂತಪ್ಪ, ಬಣಕಾರ್ ಸಿದ್ದಪ್ಪ, ಎಂ.ಎಸ್. ಚಂದ್ರು, ಸುರೇಶ್, ದರ್ಶನ್, ಹೇಮಂತ್ ಸೇರಿದಂತೆ ಮತ್ತಿತರರು ಇದ್ದರು.
December 27, 2024