ಎಲ್ಲಿ ನೋಡಿದರು ಮಾಸ್ಕ್ ವ್ಯಾಪಾರಿಗಳೇ
ಐದು ರೂಪಾಯಿಂದ ಹಿಡಿದು ಐನೂರರವರೆಗೆ
ಬೆಳಗಿನಿಂದ ಸಂಜೆಯವರೆಗೂ ಮಾರಾಟ
ಚಿತ್ರ-ವಿಚಿತ್ರದ ಮಾಸ್ಕ್-ಮಾಸ್ಕ್
ಐದು ರೂಪಾಯಿಗೆ ಒಂದು ಮಾಸ್ಕ್
ಇದು ಒಮ್ಮೆ ಬಳಸಿ ಎಸೆಯುವುದು
ಹತ್ತು, ಇಪ್ಪತ್ತು,,, ಐವತ್ತು ರೂಪಾಯಿಯ
ಮಾಸ್ಕ್ಗಳು ಕೆಲವು ದಿನ
ಬಳಸಿ ಎಸೆಯುವಂತವು
ನೂರು-ಇನ್ನೂರು-ಮುನ್ನೂರರ ಮಾಸ್ಕ್ಗಳು
ಬಳಸಲು ಮತ್ತು ತೊಳೆಯಲು ಯೋಗ್ಯವಾದವು
ನಾನೂರು ಐನೂರರ ಮಾಸ್ಕ್
ಹೊಸ-ಹೊಸ ವಿನ್ಯಾಸಗಳ
ಸುಂದರ ಚಿತ್ರಗಳ ನವೀನತೆಯ
ಬೆಡಗು ಭಿನ್ನಾಣಗಳ ಮಾಸ್ಕ್
ಯಾವ ಮಾಸ್ಕ್ ಬೇಕು ನಿಮಗೆ
ಬೆಳ್ಳಿ-ಬಂಗಾರದ ಮಾಸ್ಕ್ಗಳು
ಸಿದ್ಧವಾಗುತ್ತಿದೆ ಯಾವುದು ಬೇಕು
ಗಂಡನಿಗೆ – ಹೆಂಡತಿ ಕೇಳುತ್ತಿದ್ದಾಳೆ
ಬಂಗಾರದ ಮಾಸ್ಕ್ ಮಾಡಿಸ್ಕೊಡ್ರಿ
ಚಿತ್ರ-ವಿಚಿತ್ರದ ಬದುಕಿನಲಿ
ಎಂತೆಂಥ ಸನ್ನಿವೇಶಗಳು ಯಾವಾವ ರೂಪ
ಪಡೆಯುತ್ತವೋ ಕಾಡುತ್ತವೋ, ಬೇಡುತ್ತವೋ
ಇದು ಇರಲಿ ಹೇಳಿ ಯಾವ ಮಾಸ್ಕ್ ಬೇಕು
ನಿಮಗೆ ಯಾವ ಮಾಸ್ಕ್ ಬೇಕು ನಿಮಗೆ.
ಜೆಂಬಿಗಿ ಮೃತ್ಯುಂಜಯ
ದಾವಣಗೆರೆ.