ಕಾರ್ಮಿಕರ ಪರವಾದ ಕಾನೂನು ದುರ್ಬಲಗೊಳಿಸದಂತೆ ಎಡಪಕ್ಷ ಒತ್ತಾಯ

ದಾವಣಗೆರೆ, ಮೇ 19- ಕಾರ್ಮಿಕರ ಪರವಾದ ಕಾನೂನುಗಳನ್ನು ದುರ್ಬಲಗೊಳಿಸಬಾರದು ಎಂದು ಒತ್ತಾಯಿಸಿ, ಸಿಪಿಐ, ಸಿಪಿಐ (ಎಂ), ಎಸ್‌ ಯುಸಿಐ ಕಾರ್ಯಕರ್ತರು ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಇಂದು ಪ್ರತಿಭಟನೆ ನಡೆಸಿದರು.

ಸಾರ್ವಜನಿಕ ಸಂಪತ್ತನ್ನು ಕೇಂದ್ರ ಸರ್ಕಾರ ಖಾಸಗೀಕರಣ ಮಾಡಲು ಹೊರಟಿರುವುದನ್ನು ವಿರೋಧಿ ಸಲಾಯಿತು. ನಂತರ ಉಪವಿಭಾಗಾಧಿಕಾರಿ ಮುಖಾಂತರ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯ ಸರ್ಕಾರಗಳಿಗೆ ಕೇಂದ್ರ ಸಾಕಷ್ಟು ಅನುದಾನ ಮತ್ತು ಹಣಕಾಸು ನೆರವನ್ನು ಒದಗಿಸಬೇಕು. ವಲಸೆ ಕಾರ್ಮಿಕರಿಗಾಗಿ ಆಹಾರ ಮತ್ತು ಕುಡಿಯುವ ನೀರಿನ ವ್ಯವಸ್ಥೆ ಇರುವಂತಹ  ರೈಲು ಮತ್ತು ಬಸ್‌ಗಳನ್ನು ಅಧಿಕ ಸಂಖ್ಯೆಯಲ್ಲಿ ವ್ಯವಸ್ಥೆ ಮಾಡಬೇಕು. ಪ್ರತಿ ಕಾರ್ಮಿಕನಿಗೂ ಹತ್ತು ಸಾವಿರ ರೂ ಪ್ರಯಾಣ ಭತ್ಯೆಯಾಗಿ ನೀಡಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ದುರ್ಬಲಗೊಳಿಸಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಹೆಚ್.ಕೆ. ರಾಮಚಂದ್ರಪ್ಪ, ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್‌ವಾದಿ) ದ ಜಿಲ್ಲಾ ಕಾರ್ಯ ದರ್ಶಿ ಟಿ.ವಿ. ರೇಣುಕಮ್ಮ, ಎಸ್‌ಯುಸಿಐ ಜಿಲ್ಲಾ ಕಾರ್ಯ ದರ್ಶಿ ಮಂಜುನಾಥ್ ಕೈದಾಳೆ, ಸಿಪಿಐ ಜಿಲ್ಲಾ ಖಜಾಂಚಿ ಕೆ.ಹೆಚ್. ಆನಂದರಾಜು, ಆವರಗೆರೆ ಚಂದ್ರು, ಆವರಗೆರೆ ವಾಸು, ಮಂಜುನಾಥ ಕುಕ್ಕುವಾಡ, ತಿಪ್ಪೇಸ್ವಾಮಿ, ಭಾರತಿ, ಪರಶುರಾಮ ಸೇರಿದಂತೆ ಇತರರು ಇದ್ದರು.

error: Content is protected !!