ಫೇಸ್‌ಬುಕ್‌ನಲ್ಲಿ ತಪ್ಪು ಮಾಹಿತಿ, ಬಂಧನ

ದಾವಣಗೆರೆ, ಮೇ 19- ಶಿವಮೊಗ್ಗದಲ್ಲಿ ಪತ್ತೆ ಯಾದ ಕೊರೊನಾ ಸಂಬಂಧ ಜನರಿಗೆ ಭೀತಿ ಯುಂಟು ಮಾಡುವ ಸಂದೇಶವನ್ನು ತಮ್ಮ ಫೇಸ್‌ ಬುಕ್‌ನಲ್ಲಿ ಹರಿಬಿಟ್ಟು ವೈರಲ್ ಮಾಡಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ ಹಾಗೂ ಸಾರ್ವಜನಿಕ ಶಾಂತಿ ಕದಡಿದ ಆರೋಪದ  ಮೇಲೆ   ರಾಘು ದೊಡ್ಡಮನಿ ಎಂಬಾತನನ್ನು ಬಂಧಿಸಲಾಗಿದೆ. 

ಈ ಬಗ್ಗೆ ಸ್ಥಳೀಯ ವಿದ್ಯಾನಗರ ಪೊಲೀಸ್ ಠಾಣೆಯ ಎಎಸ್‌ಐ ವಿಜಯ್ ಅವರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. 

ಈ ಬಗ್ಗೆ ಬಿಜೆಪಿ ಯುವ ಮೋರ್ಚಾದಿಂದಲೂ ದೂರು ನೀಡಲಾಗಿತ್ತು. ಫೇಸ್‌ಬುಕ್‌ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದ ದೊಡ್ಡಮನಿ,  ‍ಶಿವಮೊಗ್ಗದಲ್ಲಿ ಪತ್ತೆಯಾದ ಎಂಟು ಮಂದಿ ಕೊರೊನಾ ಪಾಸಿಟಿವ್ ಸೋಂಕಿತರು ಗುಜರಾತಿನ ನಮಸ್ತೇ ಟ್ರಂಪ್ ಕಾರ್ಯಕ್ರಮದಲ್ಲಿ ಭಾಗಿಯಾದ ಬಿಜೆಪಿ ಕಾರ್ಯಕರ್ತರು !‌ ಇವಾಗ ಇದಕ್ಕೆ ಏನೆಂದು ಹೆಸರಿಡೋಣ ? ನಮೋ ವೈರಸ್ ? ಬಿಜೆಪಿ ವೈರಸ್ ? ಗುಜರಾತ್ ನಂಜು ?’ ಎಂದು ಹೇಳಿದ್ದರು.

error: Content is protected !!