ದಾವಣಗೆರೆ, ಮೇ 16- ಲಾಕ್ಡೌನ್ ಪರಿಣಾಮದಿಂದ ಸಂಕಷ್ಟದಲ್ಲಿರುವ ನಗರದ ಹಮಾಲಿ ಕಾರ್ಮಿಕರಿಗೆೆ ಜಿಲ್ಲಾ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕೀಟನಾಶಕ ಮಾರಾಟಗಾರರ ಸಂಘದ ವತಿಯಿಂದ ಪಡಿತರ ಕಿಟ್ಗಳನ್ನು ವಿತರಿಸುವ ಕಾರ್ಯಕ್ಕೆ ಶಾಸಕ ಎಸ್.ಎ.ರವೀಂದ್ರನಾಥ್ ಚಾಲನೆ ನೀಡಿದರು.
ಬಿಟಿ ಕಾಂಪೌಂಡ್ನಲ್ಲಿ ಇಂದು ಮೊದಲನೇ ಹಂತದಲ್ಲಿ ಸುಮಾರು ಮುನ್ನೂರೈವತ್ತು ಕಿಟ್ಗಳನ್ನು ವಿತರಣೆ ಮಾಡಲಾಯಿತು. ಸಂಘದ ಅಧ್ಯಕ್ಷ ಹಾಗೂ ಜಿಲ್ಲಾ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ನಾಗರಾಜ್ ಲೋಕಿಕೆರೆ, ಕಾರ್ಯಾಧ್ಯಕ್ಷ ಆರ್.ಜಿ.ಶ್ರೀನಿವಾಸಮೂರ್ತಿ, ಪ್ರಧಾನ ಕಾರ್ಯದರ್ಶಿ ಟಿ.ಎಂ.ಉಮಾಪತಯ್ಯ, ಖಜಾಂಚಿಗಳಾದ ಶಾಂತರಾಜ್, ಬಾಲಾಜಿ, ಗಿರೀಶ್, ನಿರ್ದೇಶಕರಾದ ವಿ.ಪಿ. ಕೃಷ್ಣಮೂರ್ತಿ, ಲಕ್ಷ್ಮಿ ನಾರಾಯಣ ಶೆಟ್ರು, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್, ಸಂಘದ ಸದಸ್ಯರಾದ ಸೋಮಶೇಖರ್, ಕುಮಾರ್ ಪುಟಗನಾಳ್, ಹೇಮಣ್ಣ ಶಿಂಗ್ರಿಹಳ್ಳಿ, 19ನೇ ವಾರ್ಡಿನ ಪಾಲಿಕೆ ಸದಸ್ಯ ಶಿವಪ್ರಸಾದ್, 34ನೇ ವಾರ್ಡಿನ ಸದಸ್ಯ ಮಂಜಾ ನಾಯ್ಕ್, ಮುಖಂಡ ಶಾಮನೂರು ಕಲ್ಲೇಶಪ್ಪ ಮತ್ತಿತರರು ಭಾಗವಹಿಸಿದ್ದರು.
December 26, 2024