ಕೊರೊನಾ ತೊಲಗಿಸುವಂತೆ ನಗರ ದೇವತೆ ದುಗ್ಗಮ್ಮನಲ್ಲಿ ಸಂಕಲ್ಪ

ದಾವಣಗೆರೆ,ಮೇ 12- ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿಗೆ ಇಂದು ಬೆಳಿಗ್ಗೆ ವಿಶೇಷ ಪೂಜೆ, ಅಭಿಷೇಕ ಮಾಡುವುದರ ಮೂಲಕ ಮಹಾಮಾರಿ ಕೊರೊನಾ ವೈರಸ್ ಸೋಂಕು ರೋಗವನ್ನು ತಡೆಗಟ್ಟುವಂತೆ ಸಂಕಲ್ಪ ಮಾಡಲಾಯಿತು.
ಕೊರೊನಾ ವೈರಸ್ ಸೋಂಕು ರೋಗದ ಹಿನ್ನೆಲೆೆಯಲ್ಲಿ ಆಗಿದ್ದ ಲಾಕ್ ಡೌನ್ ಪರಿಣಾಮ ಕಳೆದ 50 ದಿನಗಳಿಂದ ಸಾರ್ವಜನಿಕವಾಗಿ ಪೂಜಾ ಪುನಸ್ಕಾರ ಗಳನ್ನು ನಿರ್ಬಂಧಿಸಲಾಗಿದ್ದ ದುಗ್ಗಮ್ಮನ ದೇವಸ್ಥಾನದಲ್ಲಿ ಇಂದು ಗಣ್ಯರ ಸಮ್ಮುಖದಲ್ಲಿ ವಿಶೇಷ ಅಭಿಷೇಕ ನಡೆಸಲಾಯಿತು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರ ಆದೇಶ ಮತ್ತು ದೇವಸ್ಥಾನದ ಧರ್ಮದರ್ಶಿಗಳ ಸಮಿತಿ ಗೌರವಾಧ್ಯಕ್ಷರೂ ಆಗಿರುವ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಕಾರ್ಯಾಧ್ಯಕ್ಷರೂ ಆದ ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರುಗಳ ನಿರ್ದೇಶನದ ಮೇರೆಗೆ ಈ ಪೂಜೆಯನ್ನು ನೆರವೇರಿಸಲಾಯಿತು.
ಡಿಸಿ ಮಹಾಂತೇಶ್ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತ ರಾಯ, ಎಸ್ಸೆಸ್ ಕುಟುಂಬದ ಕೈಗಾರಿಕೋ ದ್ಯಮಿ ಎಸ್.ಎಸ್. ಗಣೇಶ್, ಶ್ರೀಮತಿ ರೇಖಾ ಗಣೇಶ್, ಶ್ರೀಮತಿ ಪ್ರಭಾ ಮಲ್ಲಿಕಾರ್ಜುನ್, ದಿ. ಶಾಮನೂರು ಬಸವರಾಜ ಪ್ಪನವರ ಕುಟುಂಬ ವರ್ಗದವರು, ದೇವಸ್ಥಾನದ ಟ್ರಸ್ಟಿಯೂ ಆದ ಹಿರಿಯ ಕೈಗಾರಿಕೋದ್ಯಮಿ ಅಥಣಿ ವೀರಣ್ಣ ಮುಂತಾದ ಗಣ್ಯರು ಸಂಕಲ್ಪ ಕಾರ್ಯ ಕ್ರಮದಲ್ಲಿ ಪಾಲ್ಗೊಂಡಿದ್ದರು.  ದೇವಸ್ಥಾನದ ಟ್ರಸ್ಟಿಗ ಳಾದ ಹನುಮಂತರಾವ್ ಸಾವಂತ್, ಗೌಡ್ರ ಚನ್ನ ಬಸಪ್ಪ, ಹೆಚ್.ಬಿ.ಗೋಣಪ್ಪ, ಜೆ.ಕೆ. ಕೊಟ್ರಬಸಪ್ಪ, ಉಮೇಶ್ ಸಾಳಂಕಿ, ಸೊಪ್ಪಿನ ಗುರುರಾಜ್, ಹನುಮಂತರಾವ್ ಜಾಧವ್, ಕಾರ್ಯಕರ್ತರಾದ ಟಿ. ಕರಿಬಸಪ್ಪ ಕುಂಬಾರ್, ಬಾಬುರಾವ್ ಪವಾರ್, ಕವಿರಾಜ್, ವಾಸನಿ ಬಾಬುರಾವ್, ಪಿಗ್ಮಿ ಬಾಬಣ್ಣ, ನಾಗರಾಜ್ ಜೋಯಿಷ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಸರ್ಕಾರದ ನಿಬಂಧ ನೆಗಳಂತೆ ದೇವಸ್ಥಾನದಲ್ಲಿ ಭಕ್ತರಿಗೆ ಅವಕಾಶವಿರಲಿಲ್ಲ. ಗಣ್ಯರು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಧರ್ಮದರ್ಶಿ ಗೌಡ್ರ ಚನ್ನಬಸಪ್ಪ ವಿವರಿಸಿದ್ದಾರೆ.

error: Content is protected !!