ಬಸಾಪುರದಲ್ಲಿ ಸಂಕಷ್ಟಕ್ಕೊಳಗಾದ 1500 ಜನರಿಗೆ ಆಹಾರದ ಕಿಟ್ ವಿತರಿಸಿದ ಎಸ್ಸೆಸ್ಸೆಂ

ದಾವಣಗೆರೆ,ಮೇ 12- ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಆಗಿರುವ ಲಾಕ್ ಡೌನ್ ಪರಿಣಾಮ ಮಹಾನಗರ ಪಾಲಿಕೆಯ 21ನೇ ವಾರ್ಡ್ ವ್ಯಾಪ್ತಿಯಲ್ಲಿ ರುವ ಬಸಾಪುರದಲ್ಲಿ ಸಂಕಷ್ಟಕ್ಕೊಳಗಾದ ಸುಮಾರು 1500 ಜನರಿಗೆ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ವಿತರಿಸಲಾಯಿತು.
ಬಸಾಪುರದ ಆನೆಕೊಂಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯಾಲಯದ ಮುಂಭಾಗದಲ್ಲಿ ಇಂದು ಸಂಜೆ ಏರ್ಪಾಡಾಗಿದ್ದ ಸರಳ ಕಾರ್ಯಕ್ರಮದಲ್ಲಿ ದಾನಿಗಳು ನೀಡಿದ ಕಿಟ್ ಗಳನ್ನು ಮಾಜಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರು ವಿತರಿಸಿದರು.
ಜಿಲ್ಲಾ ರೈಸ್ ಮಿಲ್ ಮಾಲೀಕರ ಸಂಘದ ಕಾರ್ಯದರ್ಶಿಗಳೂ, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರೂ, ಶ್ರೀ ಮುರುಘರಾಜೇಂದ್ರ ರೈಸ್ ಮಿಲ್ ಮಾಲೀಕರೂ ಆದ ಕೋಗುಂಡಿ ಬಕ್ಕೇಶಪ್ಪ,  ವೈ.ಬಿ. ಸತ್ಯನಾರಾಯಣ ಶ್ರೇಷ್ಠಿ ರೈಸ್ ಮಿಲ್ ಮಾಲೀಕರೂ ಆದ ದಾವಣಗೆರೆ ಲಯನ್ಸ್ ಕ್ಲಬ್ ಅಧ್ಯಕ್ಷ ವೈ.ಬಿ. ಸತೀಶ್, ಶಾರದಾ ರೈಸ್ ಮಿಲ್ ಮಾಲೀಕ ಅನಿಲ್ ಕುಮಾರ್ ಸಿಂಗ್, ಶಿವ ವಿಜಯಾ ರೈಸ್ ಮಿಲ್ ಮಾಲೀಕ ವಿಜಯಕುಮಾರ್ ಅವರುಗಳು ಕಿಟ್ ಗಳ ದಾನಿಗಳಾಗಿದ್ದಾರೆ.
ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಶಿವಲೀಲಾ ಕೊಟ್ರಯ್ಯ, ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷ ಮುದೇಗೌಡ್ರ ಗಿರೀಶ್, ಮಾಜಿ ಪಾಲಿಕೆ ಸದಸ್ಯರುಗಳಾದ ಬಾ.ಮ. ಬಸವರಾಜಯ್ಯ, ರಾಜಶೇಖರ ಗೌಡ್ರು, ರಾಜ್ಯ ಕಾಂಗ್ರೆಸ್ ಅಸಂಘಟಿತರ ಘಟಕದ ಕಾರ್ಯದರ್ಶಿ ಆನೆಕೊಂಡದ  ಕೆ.ಸಿ.ಲಿಂಗರಾಜ್, ಗ್ರಾಮದ ಮುಖಂಡರು ಗಳಾದ ಸುರೇಂದ್ರಪ್ಪ, ನಾಗೇಂದ್ರಚಾರ್, ಸಿ.ಮಹೇಶ್ವರಪ್ಪ,  ಗೌಡ್ರ ಕರಿಬಸಯ್ಯ, ಎಂ. ಎಸ್.ಕೊಟ್ರಯ್ಯ, ಕೆ.ಎಲ್.ಹರೀಶ್,   ಬಿ.ಎಂ.ಬಸಯ್ಯ, ಚೌಡಪ್ಪ, ಹನುಮಂತಪ್ಪ, ಸಿ.ಬಿ.ಬಸವರಾಜಪ್ಪ, ನಾಗರಾಜ್ ಕ್ಯಾಂಪ್, ವಿರೇಶ್ ಪುಟ್ಟರಾಜ್, ಕೆ.ಸಿ.ಲಿಂಗರಾಜ್, ಬಿ.ಎಂ.ಬಕ್ಕಯ್ಯ, ಎನ್.ಎಂ.ಕೊಟ್ರಯ್ಯ, ಬಿ.ಕೆ.ದೇವೇಂದ್ರಪ್ಪ, ನಾಗರಾಜ್ ಆನೆಕೊಂಡ, ಆದಿಮನಿ ಶಿವು, ನಿಜಲಿಂಗಪ್ಪ, ಹಾರ್ಲಿ ಉಮೇಶ್, ಬಿ.ಎನ್.ರೇಣುಕಾ, ಟಿ.ಎಂ.ರೇವಣಸಿದ್ದಯ್ಯ ಮುಂತಾದವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!