ನಗರ ಆರ್ಥಿಕತೆಗೆ ಗ್ರಹಣ ಮೋಕ್ಷ

ದಾವಣಗೆರೆ, ಮೇ 14- ನಿನ್ನೆ ನಗರದ ಆರ್ಥಿಕ ಚಟುವಟಿಕೆಗೆ ಹಿಡಿದಿದ್ದ ಗ್ರಹಣ ಪೂರ್ತಿ ಬಿಡದೇ ಅರ್ಧಚಂದ್ರನಂತಾಗಿತ್ತು. ಆದರೆ ಗುರುವಾರ ಗ್ರಹಣ ಮೋಕ್ಷವಾಗುವ ನಿರೀಕ್ಷೆಗಳು ಕಂಡು ಬಂದವು.

ಬುಧವಾರ ಮುಂಜಾನೆ ಅಂಗಡಿ ತೆರೆದು ಮಧ್ಯಾಹ್ನದ ವೇಳೆ ಮುಚ್ಚಲ್ಪಟ್ಟ ಅಂಗಡಿಗಳು ಹಾಗೂ ತೆರೆಯದೇ ಇದ್ದ ಅಂಗಡಿಗಳು ಗುರುವಾರ ಬಹುತೇಕ ತೆರೆದು ವಹಿವಾಟು ನಡೆಸಿದವು.

ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್, ಶಾಂತಲಾ, ಗೌಡರ ಜಯದೇವಪ್ಪ ಸೇರಿದಂತೆ ಹಲವಾರು ಬಟ್ಟೆ ಅಂಗಡಿಗಳು, ಪ್ಲಾಸ್ಟಿಕ್, ಹಾರ್ಡ್‌ವೇರ್, ಎಲೆಕ್ಟ್ರಾನಿಕ್ಸ್, ಪಾತ್ರೆ, ಬಟ್ಟೆ, ಜೆರಾಕ್ಸ್ ಅಂಗಡಿಗಳು ತೆರೆದಿದ್ದವು.  ನಿನ್ನೆ ಮಾರುಕಟ್ಟೆಯತ್ತ ಹೆಜ್ಜೆ ಹಾಕಲು ಹಿಂಜರಿದ ಜನತೆ ಇಂದು ಅಗತ್ಯ ವಸ್ತುಗಳನ್ನು ಕೊಳ್ಳುತ್ದಿದ್ದುದರಿಂದ ಜನ ಸಂದಣಿ ಸಾಮಾನ್ಯವಾಗಿತ್ತು.

ಪಾಲಿಕೆಗೆ ಸ್ವಯಂ ಘೋಷಣೆ ಪತ್ರ ಸಲ್ಲಿಸಬೇಕು ಎಂಬ ಆತಂಕ, ವ್ಯವಹಾರದ ಅನಿಶ್ಚಿತತೆ ನಡುವೆಯೂ ವ್ಯಾಪಾರ ಆರಂಭವಾಗಿತ್ತು.  ಲಾಕ್‌ಡೌನ್‌ ಘೋಷಿಸಿದ್ದರೂ ಜನತೆ ಅನಗತ್ಯ ಓಡಾಟ ಮುಂದುವರೆಸಿದ್ದ ಹಿನ್ನೆಲೆಯಲ್ಲಿ ಪಿ.ಬಿ. ರಸ್ತೆ, ಹದಡಿ ರಸ್ತೆ, ವಿದ್ಯಾನಗರ,  ರಿಂಗ್ ರಸ್ತೆ, ಎವಿಕೆ ಕಾಲೇಜು ರಸ್ತೆ, ಡೆಂಟಲ್ ಕಾಲೇಜು ರಸ್ತೆ, ಹಳೇಪೇಟೆಯ ಕೆಲವು ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಆದರೆ ಇದೀಗ ಬಹುತೇಕ ಎಲ್ಲಾ ರಸ್ತೆಗಳೂ ಸಂಚಾರಕ್ಕೆ ಮುಕ್ತವಾಗಿವೆ.

ಮಧ್ಯಾಹ್ನದ ವೇಳೆ ಗಡಿಯಾರ ಕಂಬ, ಚೌಕಿಪೇಟೆ, ಮಂಡಿಪೇಟೆಗಳಲ್ಲಿ ವಸ್ತುಗಳ ಲೋಡಿಂಗ್, ಅನ್ ಲೋಡಿಂಗ್ ಕಾರ್ಯ ನಡೆದಿತ್ತು. ಮಾರುಕಟ್ಟೆ ಪ್ರದೇಶದಲ್ಲಿ ಸಂಜೆಯೂ ಅಂಗಡಿಗಳು ತೆರೆದಿದ್ದವು. ಆದರೆ ಜನರ ಸಂಖ್ಯೆ ಇಳಿ ಮುಖವಾಯಿತು. ದಾವಣಗೆರೆ, ಮೇ 14- ನಿನ್ನೆ ನಗರದ ಆರ್ಥಿಕ ಚಟುವಟಿಕೆಗೆ ಹಿಡಿದಿದ್ದ ಗ್ರಹಣ ಪೂರ್ತಿ ಬಿಡದೇ ಅರ್ಧಚಂದ್ರನಂತಾಗಿತ್ತು. ಆದರೆ ಗುರುವಾರ ಗ್ರಹಣ ಮೋಕ್ಷವಾಗುವ ನಿರೀಕ್ಷೆಗಳು ಕಂಡು ಬಂದವು.

ಬುಧವಾರ ಮುಂಜಾನೆ ಅಂಗಡಿ ತೆರೆದು ಮಧ್ಯಾಹ್ನದ ವೇಳೆ ಮುಚ್ಚಲ್ಪಟ್ಟ ಅಂಗಡಿಗಳು ಹಾಗೂ ತೆರೆಯದೇ ಇದ್ದ ಅಂಗಡಿಗಳು ಗುರುವಾರ ಬಹುತೇಕ ತೆರೆದು ವಹಿವಾಟು ನಡೆಸಿದವು.

ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್, ಶಾಂತಲಾ, ಗೌಡರ ಜಯದೇವಪ್ಪ ಸೇರಿದಂತೆ ಹಲವಾರು ಬಟ್ಟೆ ಅಂಗಡಿಗಳು, ಪ್ಲಾಸ್ಟಿಕ್, ಹಾರ್ಡ್‌ವೇರ್, ಎಲೆಕ್ಟ್ರಾನಿಕ್ಸ್, ಪಾತ್ರೆ, ಬಟ್ಟೆ, ಜೆರಾಕ್ಸ್ ಅಂಗಡಿಗಳು ತೆರೆದಿದ್ದವು.  ನಿನ್ನೆ ಮಾರುಕಟ್ಟೆಯತ್ತ ಹೆಜ್ಜೆ ಹಾಕಲು ಹಿಂಜರಿದ ಜನತೆ ಇಂದು ಅಗತ್ಯ ವಸ್ತುಗಳನ್ನು ಕೊಳ್ಳುತ್ದಿದ್ದುದರಿಂದ ಜನ ಸಂದಣಿ ಸಾಮಾನ್ಯವಾಗಿತ್ತು.

ಪಾಲಿಕೆಗೆ ಸ್ವಯಂ ಘೋಷಣೆ ಪತ್ರ ಸಲ್ಲಿಸಬೇಕು ಎಂಬ ಆತಂಕ, ವ್ಯವಹಾರದ ಅನಿಶ್ಚಿತತೆ ನಡುವೆಯೂ ವ್ಯಾಪಾರ ಆರಂಭವಾಗಿತ್ತು.  ಲಾಕ್‌ಡೌನ್‌ ಘೋಷಿಸಿದ್ದರೂ ಜನತೆ ಅನಗತ್ಯ ಓಡಾಟ ಮುಂದುವರೆಸಿದ್ದ ಹಿನ್ನೆಲೆಯಲ್ಲಿ ಪಿ.ಬಿ. ರಸ್ತೆ, ಹದಡಿ ರಸ್ತೆ, ವಿದ್ಯಾನಗರ,  ರಿಂಗ್ ರಸ್ತೆ, ಎವಿಕೆ ಕಾಲೇಜು ರಸ್ತೆ, ಡೆಂಟಲ್ ಕಾಲೇಜು ರಸ್ತೆ, ಹಳೇಪೇಟೆಯ ಕೆಲವು ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಆದರೆ ಇದೀಗ ಬಹುತೇಕ ಎಲ್ಲಾ ರಸ್ತೆಗಳೂ ಸಂಚಾರಕ್ಕೆ ಮುಕ್ತವಾಗಿವೆ.

ಮಧ್ಯಾಹ್ನದ ವೇಳೆ ಗಡಿಯಾರ ಕಂಬ, ಚೌಕಿಪೇಟೆ, ಮಂಡಿಪೇಟೆಗಳಲ್ಲಿ ವಸ್ತುಗಳ ಲೋಡಿಂಗ್, ಅನ್ ಲೋಡಿಂಗ್ ಕಾರ್ಯ ನಡೆದಿತ್ತು. ಮಾರುಕಟ್ಟೆ ಪ್ರದೇಶದಲ್ಲಿ ಸಂಜೆಯೂ ಅಂಗಡಿಗಳು ತೆರೆದಿದ್ದವು. ಆದರೆ ಜನರ ಸಂಖ್ಯೆ ಇಳಿ ಮುಖವಾಯಿತು.

error: Content is protected !!