ವಿಶ್ವದೆಲ್ಲೆಡೆ ವ್ಯಾಪಿಸಿದೆ
ಕೊರೊನಾ ವೈರಾಣು
ನರ್ತಿಸುತಿವೆ ನವಿಲುಗಳು ದಾರಿಯಲಿ!
ಜಿಗಿಯುತಿವೆ ಜಿಂಕೆಗಳು ಕಡಲ ತೀರದಲಿ!
ಪೊರೆಯುತಿದೆ ಪ್ರಕೃತಿಯು ಖಗಮೃಗಗಳನು ವನರಾಶಿಯನು
ದಂಡಿಸುತ ದುರುಳ ಮನುಜರನು ಅವರ ಪಾಪಕೃತ್ಯಗಳಿಗೆ
ಬೀದಿಗಿಳಿಯದಿರಿ ಮರುಳರೇ!
ಮನುಕುಲದ ಮಹಾಮಾರಿ ನೀವೇ!
ಸಕುಟುಂಬ ಪರಿವಾರ ಮನೆಯೊಳಗಿದ್ದು
ಹಚ್ಚಿರಿ ಹಣತೆಯನು ದಿನ ರಾತ್ರಿ
ಪರಿತಪಿಸುತ ಬೇಡಿಕೊಳ್ಳಿರಿ ಅಪರಾಧಗಳ ಮನ್ನಿಸೆಂದು
ರಕ್ಷಿಸೆಮ್ಮನು ಅನವರತ ಪ್ರಭುವೇ ಎಂದು!
ಶ್ರೀ ತರಳಬಾಳು ಜಗದ್ಗುರು
ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಸಿರಿಗೆರೆ.