ರಾಣೇಬೆನ್ನೂರು, ಮೇ 5- ನಗರದ ಹಜರತ್ ಸೈಯದ್ ಜಮಾಲ ಶಾವಲ್ಲಿ ಉರುಸು ಕಮಿಟಿ ವತಿಯಿಂದ ಸ್ಥಳೀಯ ಎಲ್ಲಾ ಸಮುದಾಯದ ಬಡವರಿಗೆ ಹಾಗೂ ಕೂಲಿಕಾರ್ಮಿಕರ ಕುಟುಂಬಗಳಿಗೆ ಜೀವನಾವಶ್ಯಕ ವಸ್ತುಗಳನ್ನು ವಿತರಿಸಲಾಯಿತು.
ಕಮಿಟಿ ಅಧ್ಯಕ್ಷ ನಾಜೀರ್‌ಖಾನ್ ಬ್ಯಾಡಗಿ ಮಾತನಾಡಿ, ಉರುಸಿನ ನಂತರ ನಡೆಯುವ ಅನ್ನ ಸಂತರ್ಪಣೆಗೆ ಎಲ್ಲ ಸಮಾಜದ ಬಾಬಾನ ಭಕ್ತರು ನೀಡಿದ ಹಣ ಹಾಗೂ ದಿನಸಿಯನ್ನು ಮಾರಾಟ ಮಾಡಿದ ಹಣ ಸುಮಾರು 15 ಲಕ್ಷದಷ್ಟು ಬ್ಯಾಂಕಿನಲ್ಲಿದ್ದು, ಈ ಹಣದಿಂದ ಸುಮಾರು 2 ಸಾವಿರ ಕಿಟ್‌ಗಳನ್ನು ನಗರದ ರಬ್ಬಾಲಿ ಗಲ್ಲಿ, ಸಿದ್ದೇಶ್ವರ ನಗರ, ಮಾರುತಿ ನಗರ, ಎ.ಕೆ.ಜಿ. ಕಾಲೋನಿ, ಅಡವಿ ಆಂಜನೇಯ ಬಡಾವಣೆ, ಇಸ್ಲಾಂಪುರ, ಖತೀಬ ಗಲ್ಲಿ, ಜೆ.ಎಂ. ರಸ್ತೆ, ಕೋಟೆ ಸೇರಿದಂತೆ ಇನ್ನಿತರ ನಗರಗಳ ಬಡ ಕುಟುಂಬಗಳಿಗೆ ಅಗತ್ಯ ಜೀವನಾವಶ್ಯಕ ವಸ್ತುಗಳನ್ನು ನೀಡಲಾಗಿದೆ ಎಂದರು.
ನಗರಸಭೆ ಸದಸ್ಯ ನೂರುಲ್ಲಾ ಖಾಜಿ, ನಾಸಿರ್ ಖಾನ್ ಬ್ಯಾಡಗಿ, ಮೈನುದ್ದೀನ್ ಸೈದನ್ನನವರ, ಇರ್ಶಾದ್ ಬಳ್ಳಾರಿ, ಬಸೀರ್ ಅಹ್ಮದ್ ಕಠಾರಿ, ಶಂಶುದ್ದೀನ್ ಮತ್ತೂರ ಇನ್ನಿತರರು ಇದ್ದರು.
December 23, 2024