ಹರಿಹರ, ಏ. 20- ಮಹಾಮಾರಿ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ನಗರದ ಅಮರಾವತಿ ಬಡಾವಣೆಯಲ್ಲಿರುವ ಸೇಂಟ್ ಅಲೋಷಿಯಸ್ ಕಾಲೇಜು ವತಿಯಿಂದ ಧರ್ಮಗುರುಗಳಾದ ಯರಿಕ್‍ರವರು ಅಹಾರದ ಕಿಟ್‍ಗಳನ್ನು ನಗರದ ಬಾರ್ ಆಯಿಲ್ ಮಿಲ್ ಕಾಂಪೌಂಡ್, ಕೊಳಚೆ ಪ್ರದೇಶ ಹಾಗೂ ಗುಡಶೇಡ್ ರೋಡ್, ಕಡು-ಬಡವರ ನಿವಾಸಿಗಳಿಗೆ ವಿತರಿಸಿದರು. ಈ ಸಂದರ್ಭದಲ್ಲಿ ಮಂಜುನಾಥ ಮತ್ತು ಕಾಲೇಜಿನ ಸಿಬ್ಬಂದಿಗಳು ಉಪಸ್ಥಿತರಿದ್ದರು.
December 25, 2024