ಮಲೇಬೆನ್ನೂರು, ಏ. 18- ಪಟ್ಟಣದ ಎಲ್ ಅಂಗನವಾಡಿ ಕೇಂದ್ರದ ಪೋಷಕರು ಮತ್ತು ಸರಸ್ವತಿ ಸ್ತ್ರೀ ಶಕ್ತಿ ಸಂಘದಿಂದ ಮಂಗಳವಾರ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರಿಗೆ, ಸಿಬ್ಬಂದಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಮತ್ತು ಪೌರ ಕಾರ್ಮಿಕರಿಗೆ, ಅಲೆಮಾರಿ ಕುಟುಂಬಗಳಿಗೆ ಮಧ್ಯಾಹ್ನದ ಊಟವನ್ನು ಅವರಿದ್ದ ಸ್ಥಳಗಳಿಗೇ ತೆರಳಿ ನೀಡಿದರು.
ವೈದ್ಯಾಧಿಕಾರಿ ಡಾ. ಲಕ್ಷ್ಮಿದೇವಿ, ಎಪಿಎಂಸಿ ಸದಸ್ಯ ಜಿ. ಮಂಜುನಾಥ್ ಪಟೇಲ್, ಪುರಸಭೆ ಸದಸ್ಯರಾದ ಎ. ಆರೀಫ್ ಅಲಿ, ದಾದಾವಲಿ, ಕೆ.ಜಿ. ಲೋಕೇಶ್, ಪ್ರಕಾಶಚಾರ್, ಮುನೀರ್ ಸಾಬ್, ಆದಾಪುರ ವಿಜಯಕುಮಾರ್, ಫಕೃದ್ಧೀನ್, ಜಿಯಾವುಲ್ಲಾ, ಬೆಣ್ಣೆಹಳ್ಳಿ ಬಸವರಾಜ್, ಪುರಸಭೆ ಮುಖ್ಯಾಧಿಕಾರಿ ಧರಣೇಂದ್ರ ಕುಮಾರ್, ಅಂಗನವಾಡಿ ಕಾರ್ಯಕರ್ತೆ ಮಂಜುಳಾ ಮತ್ತು ಸ್ತ್ರೀ ಶಕ್ತಿ ಸಂಘದ ಸದಸ್ಯರು ಹಾಜರಿದ್ದರು.
December 26, 2024