ಹರಪನಹಳ್ಳಿ, ಡಿ.24- ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಹರಿಹರ ಪೀಠದಲ್ಲಿ ನಡೆಯುವ ಹರ ಜಾತ್ರೆಯಲ್ಲಿ ಈ ಬಾರಿ ಹೊಸದಾಗಿ ಹರಮಾಲೆ ವ್ರತ ಎಂಬ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಸಮಾಜದ ವಿಜಯನಗರ ಜಿಲ್ಲಾ ಘಟಕದ ಅಧ್ಯಕ್ಷ ಪ್ರಕಾಶ್ ಪಾಟೀಲ್ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚಮಸಾಲಿ ಪೀಠದ ದೂರದೃಷ್ಟಿ ಸಂಕಲ್ಪ ಸಾಮಾಜಿಕ ಬದಲಾವಣೆಯಲ್ಲಿ ಹರ ಮಾಲೆ ದೊಡ್ಡ ಪಾತ್ರ ವಹಿಸುತ್ತದೆ. ನಡತೆ ತಪ್ಪಿದ ವರನ್ನು ತಿದ್ದುವ, ದುಶ್ಚಟಗಳಿಗೆ ದಾಸರಾದ ವರನ್ನು ಅದರಿಂದ ಮುಕ್ತಿಗೊಳಿಸುವ, ಧೂಮಪಾನ, ಮದ್ಯಪಾನದಂತಹ ಸಾಮಾಜಿಕ ಪಿಡುಗುಗಳಿಗೆ ತಿಲಾಂಜಲಿ ಇಡುವ, ಎಲ್ಲಕ್ಕಿಂತ ಹೆಚ್ಚಾಗಿ ಸಮಾಜವನ್ನು ಒಳ್ಳೆಯ ಮನಸ್ಸುಗಳಿಂದ ನಿರ್ಮಿಸುವ ಆತ್ಮ ಶುದ್ಧೀಕರಿಸುವ ಮಹಾಸಂಕಲ್ಪ ಹರ ಜಾತ್ರೆ, ಹರ ಮಾಲೆಯ ಹಿಂದಿದೆ ಎಂದು ಹೇಳಿದರು.
ಯುವ ಮನಸ್ಸುಗಳು 21, 15, 9, 5 ಹಾಗೂ 3 ದಿನಗಳ ಕಾಲ ಅತ್ಯಂತ ಕಟ್ಟು ನಿಟ್ಟಾಗಿ ಹರಮಾಲೆ ವ್ರತವನ್ನು ಕೈಗೊಳ್ಳಬೇಕು. ಪಂಚಮಸಾಲಿ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಪಟೇಲ್ ಬೆಟ್ಟನಗೌಡ ಮಾತನಾಡಿ ಹರ ಜಾತ್ರೆ, ಉದ್ಯಮಿಯು ಉದ್ಯೋಗ ನೀಡುವ ಸಮಾವೇಶ, ರಾಷ್ಟ್ರೀಯ ಶಿಕ್ಷಣ ಕೌಶಲ್ಯ, ಕೃಷಿ ಸಮಾವೇಶ, ತಮ್ಮ ಚತುರ್ಥ ಪೀಠಾರೋಹಣ ಕಾರ್ಯಕ್ರಮದ ನಿಮಿತ್ಯ ಪಂಚಮಸಾಲಿ ಹರಿಹರ ಪೀಠದ ಶ್ರೀ ವಚನಾನಂದ ಸ್ವಾಮೀಜಿಯವರು ಜ.1 ರಿಂದ 3 ರವರೆಗೆ ಹರಪನಹಳ್ಳಿ ತಾಲ್ಲೂಕಿನಲ್ಲಿ ಆಯ್ದ ಗ್ರಾಮಗಳ ಗ್ರಾಮ ದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳುವರು ಎಂದು ಅವರು ಹೇಳಿದರು.
ಆದ್ದರಿಂದ ಹರ ಮಾಲೆ ವ್ರತ ಕೈಗೊಳ್ಳುವ ತಾಲ್ಲೂಕಿನ ಯುವ ಜನರು ಪಟೇಲ್ ಬೆಟ್ಟನ ಗೌಡ -9538215615, ಡಿ.ಚೆನ್ನನಗೌಡ -9741267744, ಜಿ.ಕೆ.ಮಲ್ಲಿಕಾರ್ಜುನ -9901647448, ಮಹೇಶ್ ಪೂಜಾರ್ -7019298538, ಎಸ್. ಸುರೇಶ್ -9741253034, ಶ್ರೀಮತಿ -90085 35232 ಸಂಪರ್ಕಿಸಲು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ, ಎ.ಎಚ್.ಪಂಪಣ್ಣ, ಶಶಿಧರ ಪೂಜಾರ್, ಬೇಲೂರು ಅಂಜಪ್ಪ, ಜೆ. ಓಂಕಾರಗೌಡ, ಮಂಜುನಾಥ್ ಪೂಜಾರ್, ಎಸ್. ಸುರೇಶ, ಅಂಗಡಿ ಚಂದ್ರಪ್ಪ, ಬಣಕಾರ ದೊಡ್ಡ ಮಲ್ಲಿಕಾರ್ಜುನ್. ಎ.ಜಿ. ಮಂಜು ನಾಥ್, ಡಿ. ಚೆನ್ನನಗೌಡ, ಕ್ಯಾರಕಟ್ಟಿ ಚೆನ್ನ ಬಸವನ ಗೌಡ, ಅಡವಿಹಳ್ಳಿ ಮಂಜುನಾಥ್, ಬಣಕಾರ ಮಲ್ಲಿಕಾರ್ಜುನ, ನೀಲಗುಂದ ಕೊಟ್ರೇಶ್, ಜಗದೀಶ್ ಬಾಗಳಿ ಹಾಗೂ ಮತ್ತಿತರರಿದ್ದರು.