ಹೊನ್ನಾಳಿ,ಡಿ.24- ಅಧಿಕಾರಸ್ಥ ಮಹಿಳೆಯರು ಸಂಬಂಧಿಸಿದ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುವ ಮೂಲಕ, ತಾವು ರಬ್ಬರ್ ಸ್ಟ್ಯಾಂಪ್ಗಳಲ್ಲ ಎಂಬುದನ್ನು ಸಾಬೀತುಪಡಿಸಬೇಕು ಎಂದು ಗ್ರಾಮ ಸಂಪನ್ಮೂಲ ವ್ಯಕ್ತಿ ಚಂದ್ರಕಲಾ ಹೇಳಿದರು.
ಇಲ್ಲಿನ ಚನ್ನಮಲ್ಲಿಕಾರ್ಜುನ ಸ್ವಾಮಿ ಸಂಸ್ಕೃತ ಮಹಾವಿದ್ಯಾಲಯದ ಎನ್ನೆಸ್ಸೆಸ್ ಘಟಕದ ವತಿಯಿಂದ ಇಲ್ಲಿನ ಹಿರೇಕಲ್ಮಠದ ಶ್ರೀಮತಿ ಗಂಗಮ್ಮ ಶ್ರೀ ವೀರಭದ್ರಶಾಸ್ತ್ರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ಕ್ಷೇತ್ರದಲ್ಲಿ ಹೆಚ್ಚೆಚ್ಚು ಮಹಿಳೆಯರು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ತರಬೇತಿ ಕೇಂದ್ರದ ಪ್ರಾಂಶುಪಾಲ ಜಗದೀಶ್ ಮೋತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಸಂಸ್ಕೃತ ಮಹಾವಿದ್ಯಾಲಯದ ಪ್ರಾಂಶುಪಾಲ ಎಚ್.ಎಂ. ಗುರುಪ್ರಕಾಶ್ ಅಧ್ಯಕ್ಷತೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿ ಯುವರಾಜ್ ಎಂ.ಜಕ್ಕಾಳಿ, ಗಂಗಮ್ಮ, ರಾಮಚಂದ್ರಪ್ಪ ಕಡೇಮನಿ, ಕೋರಿ ಯೋಗೀಶ್ ಕುಳಗಟ್ಟೆ, ಮುಖ್ಯ ಶಿಕ್ಷಕ ನಿಜಗುಣ ಶಿವಯೋಗಿ, ಟಿ. ಶಿವರಾಜ್, ಎನ್ನೆಸ್ಸೆಸ್ ಅಧಿಕಾರಿ ಪ್ರತಿಮಾ ನಿಜಗುಣ ಶಿವಯೋಗಿ, ಎಲ್.ಆರ್. ಅಪೇಕ್ಷಾ, ಮಂಗಳ ಗೌರಮ್ಮ ಇತರರು ಇದ್ದರು.