ಮಲೇಬೆನ್ನೂರು, ಡಿ.23- ಕೊಮಾರನಹಳ್ಳಿ ತಾಂಡಾದಲ್ಲಿರುವ ಶ್ರೀ ಸೇವಾಲಾಲ್ ಮತ್ತು ಶ್ರೀ ಮರಿಯಮ್ಮದೇವಿ ದೇವಸ್ಥಾನದಲ್ಲಿ ಮೊದಲ ಬಾರಿಗೆ ಕಾರ್ತಿಕೋತ್ಸವವನ್ನು ಭಾನುವಾರ ರಾತ್ರಿ ಸಂಭ್ರಮದಿಂದ ಆಚರಿಸಲಾಯಿತು. ಎಪಿಎಂಸಿ ಅಧ್ಯಕ್ಷ ಜಿ.ಮಂಜುನಾಥ್ ಪಟೇಲ್, ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್, ಗ್ರಾ.ಪಂ. ಸದಸ್ಯ ಮಡಿವಾಳರ ಬಸವರಾಜ್ ಅವರು ದೀಪ ಹಚ್ಚುವ ಮೂಲಕ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು.
ತಾಂಡಾದ ಮುಖಂಡರಾದ ಪರಮೇಶ್ವರ ನಾಯ್ಕ, ಜಗದೀಶ್ ನಾಯ್ಕ, ಹನುಮಂತ ನಾಯ್ಕ, ಪ್ರವೀಣ್ ನಾಯ್ಕ ಸೇರಿದಂತೆ ಇನ್ನೂ ಅನೇಕರು ಈ ವೇಳೆ ಹಾಜರಿದ್ದರು.