ಹರಿಹರ ಗ್ರಾಮದೇವತೆ ಡಬ್ಬಿ ಗಡಿಗೆಯಲ್ಲಿ 13 ಲಕ್ಷ ರೂ. ಸಂಗ್ರಹ

ಹರಿಹರ, ಡಿ.23 – ನಗರದ ಗ್ರಾಮ ದೇವತೆ ಊರಮ್ಮ ದೇವಾಲಯದ, ಕಸಬಾ ಗ್ರಾಮದ ಡಬ್ಬಿ ಗಡಿಗೆಯಲ್ಲಿ 13 ಲಕ್ಷದ 67 ಸಾವಿರದ 60 ರೂಪಾಯಿ ಸಂಗ್ರಹವಾಗಿದೆ.

ಪಾಟೀಲ್ ಬಡಾವಣೆಯ ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್ ಅವರ ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿ ಹಣವನ್ನು ಎಣಿಕೆ ಮಾಡಲಾಗಿತ್ತು. ಇನ್ನೂ ಮುಂದಿನ ದಿನಗಳಲ್ಲಿ ಮಾಜೇನಹಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಹಬ್ಬದ ಡಬ್ಬಿಗಡಿಗೆ ಎಣಿಕೆಗೆ ಚಾಲನೆ ಮಾಡಲಿದೆ ಮತ್ತು ಕಳೆದ ಬಾರಿ ಹಬ್ಬಕ್ಕಿಂತ ಈ ಬಾರಿ 3 ಲಕ್ಷ ರೂ. ಅಧಿಕ ಮೊತ್ತ ಸಂಗ್ರಹವಾಗಿರುವುದಾಗಿ ಸಮಿತಿಯವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜೇನಹಳ್ಳಿ ಗೌಡ್ರು ಚನ್ನಬಸಪ್ಪ,  ಕಸಬಾ ಗೌಡ್ರು ಲಿಂಗಾರಾಜ್ ಪಾಟೀಲ್ , ಉತ್ಸವ ಸಮಿತಿಯ ಅಧ್ಯಕ್ಷರಾದ ಕೆ. ಅಣ್ಣಪ್ಪ, ಕಾರ್ಯದರ್ಶಿ ಬೆಣ್ಣೆ ರೇವಣಸಿದ್ದಪ್ಪ, ಖಜಾಂಚಿ ಶೇರಾಪುರ ರಾಜಪ್ಪ, ಸಹ ಕಾರ್ಯದರ್ಶಿ ಪಾಲಾಕ್ಷಪ್ಪ, ಬಣಕಾರ ಸಿದ್ದಪ್ಪ, ಕೆ.ಬಿ. ರಾಜಶೇಖರ್, ಸಾಯಿಬಾಬಾ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ಬಸವರಾಜ್ ಪಾಟೀಲ್, ಕಂಚಿಕೇರಿ ಎಂ.ಚಿದಾನಂದ,  ಮಾರುತಿ, ಗಿರೀಶ್ ಹಳ್ಳದಕೇರಿ, ಶ್ರೀಕಾಂತ್ ಮಾಗಿ, ಹರಪನಹಳ್ಳಿ ಬಸವರಾಜಪ್ಪ, ಬೆಣ್ಣೆ ಸಿದ್ದಪ್ಪ, ಐರಣಿ ಭೀಮಪ್ಪ, ಗೌಡ್ರು ಬಸವರಾಜಪ್ಪ, ಬಣಕಾರ ರಾಮಪ್ಪ ಅರ್ಚಕರಾದ ವೀರೇಶ್, ನಾಗರಾಜ್  ಇತರರು ಹಾಜರಿದ್ದರು.

error: Content is protected !!