ಪಂಚಮಸಾಲಿ 2ಎ ಮೀಸಲಾತಿ ವರದಿ ಸಲ್ಲಿಸಲು ಕಾಲಮಿತಿ ಹೇಳಲಾಗದು

ಹರಿಹರ, ಡಿ.21- ರಾಜ್ಯದಾದ್ಯಂತ ಪಂಚಮಸಾಲಿ ಸಮಾಜದ ಜನರು ಹೆಚ್ಚಾಗಿ ಇರುವ ಗ್ರಾಮಗಳಿಗೆ ಭೇಟಿ ಮಾಡಿ ಅವರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗಳ ಬಗ್ಗೆ ಸಮಗ್ರವಾಗಿ ತಿಳಿದು ನಂತರದಲ್ಲಿ ಸರ್ಕಾರಕ್ಕೆ ವರದಿಯನ್ನು ನೀಡಲಾಗುತ್ತದೆ. ತದನಂತರ ಮೀಸಲಾತಿ ಕೊಡುವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರವಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.

ತಾಲ್ಲೂಕಿನ ಬನ್ನಿಕೋಡು ಗ್ರಾಮದಲ್ಲಿ ಸುಮಾರು ಐವತ್ತು ಕ್ಕೂ ಹೆಚ್ಚು ಪಂಚಮಸಾಲಿ ಸಮಾಜದ ಮನೆಗಳಿಗೆ ಭೇಟಿ ಮಾಡಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಪ್ರಗತಿಯ ವಿಚಾರಗಳನ್ನು ಸಂಗ್ರಹಿಸಿ ನಂತರದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.

ಮಾಹಿತಿ ಸಂಗ್ರಹಣೆಗೆ ಬಹಳ ಸಮಯ ಬೇಕಾಗುತ್ತದೆ ಮತ್ತು ನಾನು ಸಂಗ್ರಹಿಸಿರುವ 

error: Content is protected !!