ಎಂ.ಇ.ಎಸ್. ಪುಂಡರನ್ನು ಗೂಂಡಾ ಕಾಯ್ದೆ ಅಡಿಯಲ್ಲಿ ಬಂಧಿಸಿ ಪ್ರಕರಣ ದಾಖಲಿಸಬೇಕು

ರಾಜ್ಯ ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಒತ್ತಾಯ

ರಾಣೇಬೆನ್ನೂರು, ಡಿ.20- ದೇಶಭಕ್ತ ಸಂಗೊಳ್ಳಿ ರಾಯಣ್ಣನ ಮೂರ್ತಿಯನ್ನು ವಿರೂಪಗೊಳಿಸಿ ಕನ್ನಡ ಧ್ವಜವನ್ನು ಸುಟ್ಟು ಕನ್ನಡಿಗರ ವಾಹನಗಳನ್ನು ಜಖಂ ಗೊಳಿಸಿರುವ  ಎಂ.ಇ.ಎಸ್. ಪುಂಡರನ್ನು ಬಂಧಿಸಿ ಗೂಂಡಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ  ರವೀಂದ್ರಗೌಡ ಎಫ್. ಪಾಟೀಲ ಒತ್ತಾಯಿಸಿದರು.

ನಗರದಲ್ಲಿ ಇಂದು ರಸ್ತೆ ತಡೆ, ಪ್ರತಿಭಟನೆ ಮಾಡಿದ ರೈತ ಪರ ಮತ್ತು ಕನ್ನಡ ಸಂಘಟನೆಗಳ ನೇತೃತ್ವವನ್ನು ವಹಿಸಿ ಅವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. 

ನ್ಯಾಯವಾದಿ ಎಸ್.ಡಿ. ಹಿರೇಮಠ, ಸ್ವಾಭಿಮಾನಿ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷ ನಿತ್ಯಾನಂದ ಕುಂದಾಪುರ, ವೀರಕಂಠೀರವ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ ಬಿ., ದಿನಗೂಲಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಕೊಂಗಿಯವರ, ರಕ್ಷಣಾ ವೇದಿಕೆ ಕೊಟ್ರೇಶಪ್ಪ ಎಮ್ಮಿ, ಆನಂದ ಹುಲ್ಲಮನಿ, ಸಿದ್ದಪ್ಪ ಹೂಲಿಕಟ್ಟಿ, ಆಶೋಕ ಲಿಂಗದಳ್ಳಿ, ರೈತ ಸಂಘಟನೆಯ ಹರಿಹರಗೌಡ ಎಸ್. ಪಾಟೀಲ, ಮರಿಡೆಪ್ಪ ಎಸ್. ಚಳಗೇರಿ, ಬಾಲಚಂದ್ರ ದೊಡ್ಡಮನಿ, ಜಿ.ಬಿ. ಮಾಸ ಣಗಿ, ಬಾಷಾಸಾಬ್ ಹಂಪಳಿ, ನಾಗರಾಜ ಸುರವೆ, ಪಿ.ಬಿ. ಬಣಕಾರ, ಡಿ.ಕೆ. ತೊಂಟಗಂಟಿ ಮುಂತಾ ದವರು ಭಾಗವಹಿಸಿದ್ದರು.  ಪ್ರತಿಭಟನಾ ಸ್ಥಳಕ್ಕೆ ಆಗ ಮಿಸಿದ ತಹಶೀಲ್ದಾರರಿಗೆ ಮನವಿ ಅರ್ಪಿಸಿದರು. 

error: Content is protected !!