ಮಲೇಬೆನ್ನೂರು, ಡಿ. 20- ಕೊಮಾರನಹಳ್ಳಿ ಗ್ರಾಮದಲ್ಲಿ ಕನಕ ಬ್ರಿಗೇಡ್ ವತಿಯಿಂದ ದಾಸ ಶ್ರೇಷ್ಠ ಶ್ರೀ ಭಕ್ತ ಕನಕದಾಸರ 534ನೇ ಜಯಂತ್ಯೋತ್ಸವವನ್ನು ಭಾನುವಾರ ಸಂಭ್ರಮದಿಂದ ಆಚರಿಸಲಾಯಿತು.
ಬೆಳಿಗ್ಗೆ ಬೈಕ್ ರಾಲಿ ಮಾಡಿದ ಯುವಕರು ಮಧ್ಯಾಹ್ನ ಕನಕದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿ ಅನ್ನ ಸಂತರ್ಪಣೆ ನಡೆಸಿಕೊಟ್ಟರು. ಸಂಜೆ ಗ್ರಾಮದಲ್ಲಿ ವಿವಿಧ ಕಲಾ ತಂಡಗಳೊಂದಿಗೆ ಕನಕ ದಾಸರ ಮೂರ್ತಿಯ ಮೆರವಣಿಗೆ ವಿಜೃಂಭಣೆ ಯಿಂದ ಜರುಗಿತು. ಶಾಸಕ ಎಸ್. ರಾಮಪ್ಪ ಅವರು ಕನಕಸ ದಾಸರ ಮೂರ್ತಿಗೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.
ಮಾಜಿ ಶಾಸಕ ಬಿ.ಪಿ. ಹರೀಶ್, ಎಪಿಎಂಸಿ ಅಧ್ಯಕ್ಷ ಜಿ. ಮಂಜುನಾಥ್ ಪಟೇಲ್, ಗ್ರಾ.ಪಂ. ಅಧ್ಯಕ್ಷ ಐ.ಪಿ. ರಂಗನಾಥ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ. ಚಿದಾನಂದಪ್ಪ, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿ.ಪಂ. ಮಾಜಿ ಸದಸ್ಯರಾದ ಬಿ.ಎಂ. ವಾಗೀಶ್ ಸ್ವಾಮಿ, ಎಂ. ನಾಗೇಂದ್ರಪ್ಪ, ದಿಶಾ ಕಮಿಟಿ ಸದಸ್ಯ ಐರಣಿ ಅಣ್ಣಪ್ಪ, ಉದ್ಯಮಿ ಕುಂಬಳೂರು ವಿರೂಪಾಕ್ಷಪ್ಪ, ತಾ.ಪಂ.ಮಾಜಿ ಅಧ್ಯಕ್ಷ ಎಸ್.ಜಿ. ಪರಮೇಶ್ವರಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಕುಣೆಬೆಳಕೆರೆ ದೇವೇಂದ್ರಪ್ಪ, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಸಮಾಜ ಸೇವಕ ನಂದಿಗಾವಿ ಶ್ರೀನಿವಾಸ್, ತಾ. ಕುರುಬ ಸಮಾಜದ ಅಧ್ಯಕ್ಷ ಕೆ. ಜಡಿಯಪ್ಪ, ಕಾರ್ಯದರ್ಶಿ ಕೆ.ಪಿ. ಗಂಗಾಧರ್, ಮುಖಂಡರಾದ ಕೆ. ಷಣ್ಮುಖ, ಐರಣಿ ಮಹೇಶ್ವರಪ್ಪ, ಅಜ್ಜಪ್ಪ, ಮಲೇಬೆನ್ನೂರು ಪಿಎಸಿಎಸ್. ಅಧ್ಯಕ್ಷ ಪಿ.ಆರ್. ಕುಮಾರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್.ಎಂ. ಮಂಜುನಾಥ್, ಗ್ರಾ.ಪಂ. ಸದಸ್ಯರಾದ ಮಡಿವಾಳರ ಬಸವರಾಜ್, ನೇತ್ರಾವತಿ ಹನುಮಂತ, ಕಮಲಾಬಾಯಿ ಪರಮೇಶ್ವರನಾಯ್ಕ ಮತ್ತು ಮಲೇಬೆನ್ನೂರಿನ ಎ. ಆರೀಫ್ ಅಲಿ, ಕೊಕ್ಕನೂರಿನ ಸೋಮಶೇಖರ್ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.
ಕನಕ ಬ್ರಿಗೇಡ್ನ ಜಿ.ಎಂ. ಸುನೀಲ್, ಉದ್ದಣ್ಣರ ಅಣ್ಣಪ್ಪ, ಐ.ಆರ್. ಚಿದಂಬರ್, ಎಸ್.ಎಂ. ಪ್ರತಾಪ್, ಎಸ್.ಜಿ. ವಿಜಯ, ಅಣ್ಣಯ್ಯ, ಅನಿಲ್ ಮತ್ತಿತರರು ಹಾಜರಿದ್ದು ಕಾರ್ಯಕ್ರಮ ನಡೆಸಿಕೊಟ್ಟರು.