ದಾವಣಗೆರೆ, ಡಿ.20- ಸುಬ್ರಹ್ಮಣ್ಯ ನಗರದ ಪಕ್ಕದಲ್ಲಿರುವ ಹೊಸ ಬಡಾವಣೆಗೆ ನಟ, ಅನಾಥ ಮಕ್ಕಳ ರಕ್ಷಕ, ವೃದ್ಧರಿಗೂ ಸಹಾಯ ಹಸ್ತ ನೀಡಿ, ಹೆಸರು ಮಾಡಿದ್ದ ದಿ|| ಪುನೀತ್ ರಾಜ್ಕುಮಾರ್ ಬಡಾವಣೆ ಹೆಸರಿನ ನಾಮ ಫಲಕವನ್ನು ಕಾಂಗ್ರೆಸ್ ಪ್ರಧಾನ ಕಾರ್ಯ ದರ್ಶಿ ಸೋಮಲಾಪುರದ ಹನುಮಂತಪ್ಪ ಅನಾವರಣ ಮಾಡಿದರು.
ಸಮಾರಂಭದ ಅಧ್ಯಕ್ಷ ತೆಯನ್ನು ಸುರೇಶ್ ಕೆ.ಜಿ. ವಹಿಸಿದ್ದರು. ಉಪಾಧ್ಯಕ್ಷ ತಿಪ್ಪೇಸ್ವಾಮಿ.ಟಿ., ಕಾರ್ಯದರ್ಶಿ ನಾಗರಾಜ್ ಡಿ.ಎಸ್., ಸಹ ಕಾರ್ಯದರ್ಶಿ ತಿಪ್ಪೇಸ್ವಾಮಿ ಎಸ್., ಖಜಾಂಚಿ ರಾಜು.ಬಿ, ಸದಸ್ಯರುಗಳಾದ ಶಿವರುದ್ರಪ್ಪ ಟಿ., ಉಮೇಶ್.ಹೆಚ್., ವಿಜಯ ಕುಮಾರ್, ಮಂಜುನಾಥ್ ಹೆಚ್.ಬಿ., ದಾದಾ ಬುಡೇನ್ ಆರ್., ಮಹಮ್ಮದ್ ರಫೀಖ್, ಅಭಿಷೇಕ್.ಎಂ.ಎಂ., ರಾಜೇಶ್ ಎಂ., ಅಶೋಕ್, ಉಮೇಶ್ ಸಿ.ಹೆಚ್., ಚೇತನ್ ಎಂ., ಮಹಿಳಾ ಸದಸ್ಯರಾದ ಉಮಾ ಎಸ್.ಕೆ., ಪ್ರಮೀಳಾ, ಮಮತ, ಅನಿತ, ಪಲ್ಲವಿ, ಭಾಗ್ಯ, ಶೀಲಾಬಾಯಿ, ಲಕ್ಷ್ಮಿ ಜಿ.ವಿ., ಮಮತ, ವಿಮಲ ಮತ್ತಿತರರಿದ್ದರು.